ಪ್ರಕಟಣೆ
ಯಶಸ್ವಿನಿ ಸಹಕಾರಿ ಆರೋಗ್ಯ ರಕ್ಷಣಾ ಯೋಜನೆ 2025-26 ನೇ ಸಾಲಿಗೆ ಯಶಸ್ವಿನಿ ಯೋಜನೆಯನ್ನು ಮರುಜಾರಿ ಮಾಡಿದ್ದು ರೈತ ಸದಸ್ಯರು ಕುಟುಂಬದವರು ವಿಮೆ ಮಾಡಿಸಿಕೊಂಡು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ವಿನಂತಿ. ನೋಂದಣಿ ಪ್ರಾರಂಭವಾಗಿದೆ ನೋಂದಣಿ ಪ್ರಕ್ರಿಯೆ ದಿನಾಂಕ : 01-01-2026 ರಂದು ಪ್ರಾರಂಭ ದಿನಾಂಕ : 20-03-2026 ಕ್ಕೆ ಮುಕ್ತಾಯ ಯಶಸ್ವಿನಿ ಫಲಾನುಭವಿ ಪ್ರಕ್ರಿಯೆ ದಿನಾಂಕ : 01-04-2026 ರಿಂದ 31-03-2027 ರ ವರೆಗೆ ಜಾರಿಯಲ್ಲಿರುತ್ತದೆ, ನೋಂದಣಿಗೆ ಲಗತ್ತಿಸಬೇಕಾದ ದಾಖಲೆಗಳು 1) ಅರ್ಜಿ ನಮೂನೆ 2) ಆಧಾರ ಕಾರ್ಡ ಜರಾಕ್ಷ (ಯೋಜನೆಗೆ ಒಳಪಡುವ ಎಲ್ಲ ಸದಸ್ಯರು) 3) ರೇಷನ ಕಾರ್ಡ ಜರಾಕ್ಷ 4) ಯೋಜನೆಗೆ ಒಳಪಡುವ ಪ್ರತಿಯೊಬ್ಬ ಸದಸ್ಯರ ತಲಾ 2 ಫೋಟೋ 5) ಸಾಮಾನ್ಯ ಕುಟುಂಬದ ಗರಿಷ್ಠ 4 ಸದಸ್ಯರಿಗೆ ವಾರ್ಷಿಕ 500/- ರೂ. 6) ಯಶಸ್ವಿನಿ ಸೇವಾ ಶುಲ್ಕ 25/- ರೂ. 7) ನಂತರ ಪ್ರತಿ ಸದಸ್ಯರಿಗೆ 100/- ರೂ. 8) ಪ.ಜಾ./ಪ.ಪಂ. ಸದಸ್ಯರಿಗೆ ಉಚಿತ (ಜಾತಿ ಪ್ರಮಾಣ ಪತ್ರ ನೀಡಿದಲ್ಲಿ ಮಾತ್ರ) 9) ಕುಟುಂಬದ ಒಬ್ಬ ವ್ಯಕ್ತಿ ನಮ್ಮ ಸಂಘದಲ್ಲಿ ಸದಸ್ಯನಾಗಿ 3 ತಿಂಗಳು ಗತಿಸಿದಲ್ಲಿ ಮಾತ್ರ ಆ ಕುಟುಂಬ ಈ ಯೋಜನೆಗೆ ಅರ್ಹವಾಗಿರುತ್ತದೆ. 10) ಕುಟುಂಬ ಎಂದರೆ: ಪ್ರಧಾನ ಅರ್ಜಿದಾರರ ತಂದೆ, ತಾಯಿ, ಗಂಡ/ ಹೆಂಡತಿ, ಗಂಡು ಮಕ್ಕಳು, ಮದುವೆಯಾಗದ ಹೆಣ್ಣು ಮಕ್ಕಳು, ಸೊಸೆಯಂದಿರು ಮತ್ತು ಮೊಮ್ಮಕ್ಕಳು. 11) ಕುಟುಂಬದ ಯಾವುದೇ ಸದಸ್ಯ ಸರ್ಕಾರಿ ನೌಕರರಾಗಿದ್ದು ಅಥವಾ ಖಾಸಗಿ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ವೇತನ ಪಡೆಯುತ್ತಿದ್ದಲ್ಲಿ ಅಂತಹ ವ್ಯಕ್ತಿ ಈ ಯೋಜನೆಗೆ ಅರ್ಹರಾಗಿರುವುದಿಲ್ಲ. 12) ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 20-03-2026