logo

ಮಟನ್‌ ಗ್ರೇವಿಗೆ 15 ವಯಾಗ್ರಾ ಮಾತ್ರೆ ಬೆರೆಸಿ ಪತಿ ಕೊಲ್ಲಲು ಪ್ಲ್ಯಾನ್‌! ಆದರೆ ಮುಂದಾಗಿದ್ದೇನು?

ತೆಲಂಗಾಣ ರಾಜ್ಯದ ಕರೀಂ ನಗರದಲ್ಲಿ ಬಹಳ ಕುತೂಹಲಕಾರಿ ಕೊಲೆ ಪ್ರಸಂಗ ಬೆಳಕಿಗೆ ಬಂದಿದೆ. ಮೌನಿಕ ಎನ್ನುವ ಪತ್ನಿ ತನ್ನ ಗಂಡನ ಕಿರಿಕಿರಿ ತಾಳಲಾರದೆ ಮಟನ್‌ ಗ್ರೇವಿಯಲ್ಲಿ ಬರೋಬ್ಬರಿ 15 ವಯಾಗ್ರ ಮಾತ್ರೆ ಬರೆಸಿ ತನ್ನ ಪತಿ ಸುರೇಶ್‌ ನನ್ನು ಕೊಲೆ ಮಾಡಲು ಪ್ರಯತ್ನ ಮಾಡಿದ್ದಾಳೆ. ಇದು ವಿಫಲಗೊಂಡಾಗ ಇನ್ನೊಂದು ಪ್ಲಾನ್‌ ಮಾಡಿದ್ದಾಳೆ.
ಮೌನಿಕ ಮತ್ತು ಸುರೇಶ್‌ ದಾಂಪತ್ಯ ಜೀವನ ಚೆನ್ನಾಗಿ ನಡೆಯುತ್ತಿತ್ತು. ಆದರೆ ಸಹವಾಸ ದೋಷದಿಂದ ಸುರೇಶ್‌ ಮದ್ಯವ್ಯಸನಿಯಾಗಿಬಿಟ್ಟ. ಕುಡಿತದ ನಂತರ ಹೆಂಡತಿ ಮೌನಿಕಗೆ ನಿಂದಿಸುವುದು ಹಾಗೂ ಪತ್ನಿಯ ಹಣವನ್ನು ಕಸಿದುಕೊಂಡು ಹೋಗಿ ಎಣ್ಣೆ ಹೊಡೆಯಲಾರಂಭಿಸಿದ್ದ.
ಇದರಿಂದ ರೋಸಿ ಹೋದ ಮೌನಿಕ, ಕೊನೆಗೆ ಸಾಯಿಸಲು ಮಾಸ್ಟರ್‌ ಪ್ಲ್ಯಾನ್‌ ಮಾಡಿದಳು. ಇದಕ್ಕೆ ಆಕೆಯ ಗೆಳೆಯ ಸಾಥ್‌ ನೀಡಿದ್ದಾನೆ. ಮೆಡಿಕಲ್‌ ಮಾಲೀಕ ಮಟನ್‌ನಲ್ಲಿ 15 ವಯಾಗ್ರಾ ಮಾತ್ರೆ ಸೇರಿಸಿ ಊಟ ಹಾಕುವಂತೆ ಐಡಿಯಾ ಕೊಟ್ಟ. ಆದರೆ ಸುರೇಶ ಮಟನ್‌ ವಾಸನೆ ಬದಲಾಗಿದ್ದನ್ನು ಕಂಡು ಹಿಡಿದಿದ್ದರಿಂದ ಇವರಿಬ್ಬರ ಪ್ಲ್ಯಾನ್‌ ಪ್ಲಾಪ್‌ ಆಯಿತು.
ಇದಾದ ನಂತರ ಇನ್ನೊಂದು ಪ್ಲ್ಯಾನ್‌ ಮಾಡಿದಳು. ಸೆ.17,2025 ರಂದು ಮೌನಿಕ ತನ್ನ ಗೆಳೆಯನ ಜೊತೆಗೂಡಿ ತನ್ನ ಪತಿ ಸುರೇಶನಿಗೆ ಮದ್ಯದಲ್ಲಿ ಬಿಪಿ ನಿದ್ರೆ ಮಾತ್ರೆ ಹಾಕಿ ಪ್ರಜ್ಞೆ ತಪ್ಪುವಂತೆ ಮಾಡಿ, ನಂತರ ಮೌನಿಕಳ ಗೆಳೆಯ ಹಾಗೂ ಮತ್ತವರ ಸಹಚರರು ಕತ್ತು ಹಿಸುಕಿ ಕೊಲೆ ಮಾಡಿದ್ದರು. ಆಮೇಲೆ ಪೊಲೀಸರ ಬಳಿ ಲೈಂಗಿಕ ಕ್ರಿಯೆ ಮಾಡುವಾಗ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ ಎಂದು ಕಥೆ ಕಟ್ಟಿದ್ದಳು.
ಮೊದಲಿಗೆ ಇದನ್ನು ಸಹಜ ಸಾವು ಎಂದು ಭಾವಿಸಲಾಗಿತ್ತು. ಆದರೆ ಆಕೆಯ ಕುಟುಂಬದವರು ಸುರೇಶನಿಗೆ ಮಾಡಿಸಲಾಗಿದ್ದ ಇನ್‌ಶ್ಯೂರೆನ್ಸ್‌ ಕ್ಲೈಮ್‌ ಮಾಡಲು ಪೊಲೀಸ್‌ ಠಾಣೆಗೆ ದೂರು ದಾಖಲಿಸಲು ಮೌನಿಕ ಮೇಲೆ ಒತ್ತಡ ಹೇರಿದಾಗ, ಆಗ ಮರಣೋತ್ತರ ಪರೀಕ್ಷೆಯಲ್ಲಿ ಸುರೇಶನ ಕುತ್ತಿಗೆ ಭಾಗದಲ್ಲಿ ಗಾಯಗಳಾಗಿರುವುದು ಕಂಡು ಬಂದಿತ್ತು. ಆಗ ಹೆಚ್ಚಿನ ರೀತಿಯಲ್ಲಿ ತನಿಖೆ ಮಾಡಿದಾಗ ಮೌನಿಕ ತಾವು ಗಂಡನನ್ನು ಸಾಯಿಸಿರುವುದು ಒಪ್ಪಿಕೊಂಡಿದ್ದಾಳೆ.

0
66 views