logo

25ನೇ ವರ್ಷದ ಸಂಸ್ಥಾಪನ ದಿನಾಚರಣೆಯ ಪ್ರಯುಕ್ತ ರೈತರಿಗೆ ಕೀಟನಾಶಕ ಬಳಕೆಯ ಬಗ್ಗೆ ಜಾಗೃತಿ ಕಾರ್ಯಕ್ರಮ

೨೫ನೇ ವರ್ಷದ ಸಂಸ್ಥಾಪನಾ ದಿನಾಚರಣೆ: ರೈತರಿಗೆ ಕೀಟನಾಶಗಳ ಬಗ್ಗೆ ಜಾಗೃತಿ ಕಾರ್ಯಕ್ರಮ


ಚಿಕ್ಕಬಳ್ಳಾಪುರ: ರೈತಮಿತ್ರ ಇನ್ ಸೆಕ್ಟಿಸೈಡ್ ಇಂಡಿಯಾ ಲಿಮಿಟೆಡ್ ಸಂಸ್ಥೆಯ ೨೫ನೇ ವರ್ಷದ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಕೀಟನಾಶಕ ಮತ್ತು ಕಳೆನಾಶಕ ಬಳಕೆಯ ಸಂದರ್ಭದಲ್ಲಿ ರೈತಾಪಿ ವರ್ಗ ವಹಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಿದರು.

ತಾಲೂಕಿನ ವರದಹಳ್ಳಿ, ಹಿರೇಹನಳ್ಳಿ ಗ್ರಾಮದಲ್ಲಿ ಏರ್ಪಡಿಸಿದ್ದ ಸಂಸ್ಥಾಪನ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದ ಬೆಂಗಳೂರು ವಿಭಾಗೀಯ ಮಾರುಕಟ್ಟೆ ವ್ಯವಸ್ಥಾಪಕ ಮಂಜುನಾಥ್ ಮಾತನಾಡಿ ಕೀಟನಾಶಕ ಖರೀದಿಸುವ ಮೊದಲು ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಿಗಳಿಂದ ಸರಿಯಾದ ಸಲಹೆಯನ್ನು ತೆಗೆದುಕೊಳ್ಳಬೇಕು.ಖರೀದಿಸುವ ಅಂಗಡಿ ಬಿಲ್‌ನೊಂದಿಗೆ ಅಧಿಕೃತ ಡೀಲರ್‌ನಿಂದಲೇ ಖರೀದಿಸಿ ಎಂದರು.

ಕೀಟನಾಶಕಗಳನ್ನು ಸಾಗಿಸುವಾಗ ಅವುಗಳನ್ನು ಆಹಾರ ಪದಾರ್ಥಗಳು, ಜನರು ಮತ್ತು ಪ್ರಾಣಿಗಳಿಂದ ದೂರವಿಡಬೇಕು. ಸಿಂಪಡಿಸುವ ಮೊದಲು ಕೀಟನಾಶಕ ಲೇಬಲ್ ಮತ್ತು ಲಗತ್ತಿನಸಲಾದ ಕರಪತ್ರವನ್ನು ಎಚ್ಚರಿಕೆಯಿಂದ ಓದಿ ನೀಡಿರುವ ಸೂಚನೆಗಳನ್ನು ಅನುಸರಿಸಬೇಕು. ಯಾವಾಗಲೂ ಸೂಕ್ತ ಪ್ರಮಾಣದಲ್ಲಿ ಕೀಟನಾಶಕಗಳನ್ನು ಬಳಸಿ ಮತ್ತು ಸುರಕ್ಷಿತಾ ಸಾಧನಗಳನ್ನು ಧರಿಸಿ ಸಿಂಪಡಣೆಯನ್ನು ಯಾವಾಗಲೂ ಗಾಳಿ ಬೀಸುವ ದಿಕ್ಕಿನಲ್ಲಿಯೇ ಮಾಡಬೇಕು. ಕೀಟನಾಶಕಳನ್ನು ಬೆಳಿಗ್ಗೆ ಅಥವಾ ಸಂಜೆ ಬಳಸಬೇಕು. ಸಿಂಪಡಿಸಲು ಯಾವಾಗಲೂ ಸರಿಯಾದ ಯಂತ್ರ ಮತ್ತು ನಳಿಕೆಯನ್ನು ಬಳಸಿ ಔಷದವು ಸ್ಪೆöÊಯರ್ ಪಂಪಿನಿAದ ಸೋರಿಕೆಯಾಗದಂತೆ ಎಚ್ಚರವಹಿಸಿ ಎಂದು ತಿಳಿಸಿದರು.

ರೈತಮಿತ್ರ ಇನ್ ಸೆಕ್ಟಿಸೈಡ್ ಇಂಡಿಯಾ ಪ್ರಾಡಕ್ಟ್ ಡೆವಲಪ್‌ಮೆಂಟ್ ಮೇನೇಜರ್ ಎನ್.ಮನು ಮಾತನಾಡಿ ರೈತಾಪಿ ಮಿತ್ರರು ಕೀಟನಾಶಕಗಳನ್ನು ಆಹಾರ ಪದಾರ್ಥಗಳು ಮತ್ತು ಪಶು ಆಹಾರದೊಂದಿಗೆ ಸಂಗ್ರಹಿಸಬಾರದು. ಆಹಾರ ಪದಾರ್ಥಗಳನ್ನು ಖಾಲಿ ಕೀಟನಾಶಕ ಪಾತ್ರೆಗಳಲ್ಲಿ ಸಂಗ್ರಹಿಸಬಾರದು. ವಿಪರೀತ ಶಾಖ ಅಥವಾ ಮನೆಯ ಸಮಯದಲ್ಲಿ ಸಿಂಪಡಣೆ ಮಾಡಬಾರದು. ಸಿಂಪಡಿಸುವ ಸಮಯದಲ್ಲಿ ಆಹಾರ ಸೇರಿ ಏನನ್ನೂ ತಿನ್ನಬಾರದು. ಕುಡಿಯಬಾರದು, ಧೂಮಪಾನ ಸೇವಿಸಬಾರದು ಎಂದರು.

ಸಿAಪಡಣೆಯ ನಂತರ ಖಾಲಿ ಕೀಟನಾಶಕ ಪಾತ್ರೆಗಳನ್ನು ಕೊಳ, ಹೊಳೆ, ನದಿಗಳಿಗೆ ಎಸೆಯಬಾರದು. ಸ್ಪೆçöÊಯರ್ ಯಂತ್ರಗಳನ್ನು ಹರಿಯುವ ನೀರಿನಲ್ಲಿ ಸ್ವಚ್ಛಗೊಳಿಸಬಾರದು. ಸೋಂಕು ತಗುಲಿದ ತಕ್ಷಣ ವೈದ್ಯರನ್ನು ಸಂಪರ್ಕಿಸಿ,ಯಾರೊಬ್ಬರೂ ಅಜಾಗರೂಕರಾಗಿರಬಾರದು. ಮಕ್ಕಳಿಗೆ ಸಿಂಪಡಿಸಲು ಬಿಡಬಾರದು. ಸಿಂಪಡಣೆ ಮಾಡುವ ಸ್ಥಳದಲ್ಲಿ ಆಹಾರ ಪದಾರ್ಥಗಳನ್ನು ಇಡಬಾರದು ಎಂದು ಸಲಹೆ ನೀಡಿದರು.

ಈ ವೇಳೆ ಎರಡೂ ಗ್ರಾಮಗಳ ರೈತರು ಬೆಂಗಳೂರು ವಿಭಾಗದ ಅಭಿವೃದ್ದಿ ಅಧಿಕಾರಿ ಆದರ್ಶ್ ಮತ್ತಿತರರು ಇದ್ದರು.

5
631 views