logo

ಮಾಧ್ಯಮಗಳ ವರದಿಗಳಿಗೆ ಎಚ್ಚೆತ್ತುಕೊಂಡ ಅರೋಗ್ಯ ಇಲಾಖೆ ಅಧಿಕಾರಿಗಳು.         ಮಾಧ್ಯಮಗಳ ವರದಿಗಳು ಅಧಿಕಾರಿಗಳನ್ನು ಎಚ್ಚರಿಸುವಲ್ಲಿ ಮತ್ತು ತ್ವರಿತ ಕ್ರಮ ಕೈಗೊಳ್ಳುವಂತೆ ಮಾಡುವಲ್ಲ

ಝಳಕಿ : ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಸುಮಾರು ತಿಂಗಳುಗಳಿಂದ ಔಷಧಿ ಕೊರತೆ ಯಿಂದ ಬಡ ರೋಗಿಗಳು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು ಈ ಕುರಿತು ಕರ್ನಾಟಕ ರಕ್ಷಣಾ ವೇದಿಕೆ ಇಂಡಿ ತಾಲೂಕಾ ಉಪಾಧ್ಯಕ್ಷರು ಪ್ರಕಾಶ ಪಾಟೀಲ ಮತ್ತು ಝಳಕಿ ವಲಯದ ಅಧ್ಯಕ್ಷ ರವಿಕುಮಾರ ಹೂಗಾರ ಅವರು ನಮ್ಮ ಮಾಧ್ಯಮದ ಮುಖಾಂತರ ಆಕ್ರೋಶ ಹೊರ ಹಾಕಿದ್ದರು. ಈ ಕುರಿತು ನಿನ್ನೆ ನಮ್ಮ ಚಾನೆಲ್ ನಲ್ಲಿ ವರದಿಯಾಗಿತ್ತು.
ಕೂಡಲೇ ಎಚ್ಚೆತ್ತುಕೊಂಡು ಸ್ಥಳಕ್ಕೆ ಭೇಟಿ ನೀಡಿದ ಇಂಡಿ ವಿಭಾಗದ ಆರೋಗ್ಯ ಇಲಾಖೆ ಅಧಿಕಾರಿ ಡಾ. ಕೊಳೇಕರ ಪರಿಶೀಲನೆ ಮಾಡಿ ಕೂಡಲೆ ಬೇಕಾಗುವ ಎಲ್ಲಾ ರೀತಿಯ ಔಷಧಗಳನ್ನು ಖರೀದಿಸಿ, ಬಡ ರೋಗಿಗಳಿಗೆ ವಿತರಣೆ ಮಾಡಿ, ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಸಮಸ್ಸೆ ಬರದಂತೆ ನೋಡಿಕೊಳುವಂತೆ ಆದೇಶ ನೀಡಿದರು.
ಮಾಧ್ಯಮಗಳ ವರದಿಗಳು ಅಧಿಕಾರಿಗಳನ್ನು ಎಚ್ಚರಿಸುವಲ್ಲಿ ಮತ್ತು ತ್ವರಿತ ಕ್ರಮ ಕೈಗೊಳ್ಳುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಎಂಬುದಕ್ಕೆ ಇದೇ ಸಾಕ್ಷಿಯಾಗಿದೆ.
     ಈ ಸಂದರ್ಭದಲ್ಲಿ ಅರೋಗ್ಯ ಅಧಿಕಾರಿಗಳು ಸತೀಶ್ ಪಾಟೀಲ, ನರಸಿಂಗ್ ಆಫಿಸರ್ ವಿದ್ಯಾಶ್ರೀ ದುರ್ಗ, ಔಷಧಿ ಅಧಿಕಾರಿಗಳು ಲಕ್ಷ್ಮಣ ಪೂಜಾರಿ, ಎಸ್. ಡಿ. ಸಿ. ಮಹೇಶ್ ಇಂಡಿ, ನಿಂಗಣ್ಣ ಕೊರಳ್ಳಿ, ಡಿ ದರ್ಜೆ ಅಧಿಕಾರಿಗಳು ಪಾಟೀಲ, ವಿಶ್ವನಾಥ್ ಡಿ. ಟಿ. ಎಂ., ಗ್ರಾಮಸ್ಥರು ಅಶೋಕ ಬಡಿಗೇರ್, ರವಿಕುಮಾರ್ ಹೂಗಾರ, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

0
99 views