logo

ಮ್ಯುಟೇಶನ್ ಅನುಮೋದನೆಗೆ ಸ್ವಯಂ ಚಾಲನೆ ನಿರ್ವಹಣೆ

ಕರ್ನಾಟಕಭೂಕಂದಾಯನಿಯಮಗಳು 1966 ರ ನಿಯಮ 66ರ ಅಡಿಯಲ್ಲಿ ಹಕ್ಕು ಬದಲಾವಣೆಯ ನಮೂದನ್ನು ಪ್ರಸ್ತಾಪಿಸಿದ್ದುಸರಕಾರದಅಧಿಸೂಚನೆಯಲ್ಲಿಹಕ್ಕುಬದಲಾವಣೆಯಲ್ಲಿ ಆಕ್ಷೇಪಣೆ ಇಲ್ಲದಪ್ರಕರಣಗಳಲ್ಲಿಹಕ್ಕುಬದಲಾವಣೆಯ ನಮುದುಗಳು ಸ್ವಯಂಚಾಲಿತವಾಗಿ ಜಾರಿಗೆ ತರತಕ್ಕದ್ದು ಎಂದು ಆಯುಕ್ತರು ಕಂದಾಯ ಇಲಾಖೆ ಬೆಂಗಳೂರು ಮೀನಾ ನಾಗರಾಜ್ ರವರು ಎಲ್ಲ ಜಿಲ್ಲಾಧಿಕಾರಿಗಳಿಗೆ ಆದೇಶಿಸಿದ್ದಾರೆ.
ನೊಂದಾಯಿತ ಮ್ಯುಟೇಶನ್ ಗಳಿಗೆ ಅಂದರೆ ಕ್ರಯ ವಿಭಾಗ ದಾನ ಇತ್ಯಾದಿ ಮ್ಯುಟೇಶನ್ ಗಳಿಗೆ ಸಂಬಂಧಿಸಿದಂತೆ 7 ದಿನಗಳ ನೋಟಿಸ್ ಅವಧಿ ಮತ್ತು ನೋಂದಾಯಿತ ಇಲ್ಲದ ಮ್ಯುಟೇಶನ್ ಗಳಿಗೆ ಅಂದರೆ ಪೌ ಮ್ಯುಟೇಷನ್ ಗಳಿಗೆ ಸಂಬಂಧಿಸಿದಂತೆ 15 ದಿನಗಳ ನೋಟಿಸ್ ಅವಧಿ ಇರುತ್ತದೆ. ಪ್ರಸ್ತುತ ತಂತ್ರಾಂಶದಲ್ಲಿ ಸದರಿ ನೋಟಿಸ್ ಅವಧೀಯ ನಂತರ ಹೋಬಳಿ ರಾಜಸ್ವ ನಿರೀಕ್ಷಕರು ಮ್ಯುಟೇಶನ್ ಅನುಮೋದನೆ ಮಾಡುತ್ತಿದ್ದಾರೆ. ಸರ್ಕಾರದ ಅಧಿಸೂಚನೆಯಂತೆ ಸ್ವಯಂ ಚಾಲಿತ ಮ್ಯುಟೇಶನ್ ಅನುಮೋದನೆ ಜಾರಿಗೆ ಗೊಳಿಸಿದ್ದು ಅದರಂತೆ ನೊಂದಾಯಿತ ಮ್ಯುಟೇಶನ್ ಗಳಿಗೆ ಮತ್ತು ನೋಂದಾಯಿತ ಇಲ್ಲದ ಮ್ಯುಟೇಶನ್ ಗಳಿಗೆ ಕ್ರಮವಾಗಿ 8ನೇ ದಿನದ ಮಧ್ಯರಾತ್ರಿ ಮತ್ತು 16 ದಿನದ ಮಧ್ಯರಾತ್ರಿ ತಂತ್ರಾಂಶದಲ್ಲಿ ಸ್ವಯಂ ಚಾಲಿತವಾಗಿ ಸರ್ವರ್ ಸಿಗ್ನೇಚರ್ ಮೂಲಕ ಅನುಮೋದನೆ ಯಾಗುತ್ತದೆ. ಅದರಂತೆ ರಾಜಸ್ವ ನಿರೀಕ್ಷಕರ ಅನುಮೋದನೆಯ ಅಗತ್ಯ ಇರುವುದಿಲ್ಲ. ಆದರೆ ಸಂಬಂಧಿಸಿದ ರಾಜ್ಯಸ್ವ ನಿರೀಕ್ಷಕರು ಸದರಿ ನೋಟಿಸ್ ಅವಧಿಯಲ್ಲಿ ಆಕ್ಷೇಪಣೆಯನ್ನು ಸಲ್ಲಿಸಲು ಅವಕಾಶವಿರುತ್ತದೆ ಎಂದು ಆಯುಕ್ತರು ತಿಳಿಸಿದ್ದಾರೆ.

14
456 views