logo

ಬಳ್ಳೊಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷತೆಯಲ್ಲಿ ಜಿಲ್ಲಾ, ತಾಲೂಕಾ ಮತ್ತು ಗ್ರಾಮ ಪಂಚಾಯತ್ ಚುನಾವಣೆ ಕುರಿತು ವಿಚಾರ ಗೋಷ್ಠಿ ನಡೆಸಲಾಯಿತು.

ಮಾರ್ಚ್ 8 ರಂದು ತಾಲೂಕು, ಜಿಲ್ಲೆ ಮತ್ತು ರಾಜ್ಯದ ಸಲಹಾ ಸಮಿತಿಯ ಮುಖಂಡರು, ಹಿರಿಯರು, ಪದಾಧಿಕಾರಿಗಳ ಸಹಯೋಗದಲ್ಲಿ ಗ್ರಾಮೀಣ ಮಟ್ಟದಲ್ಲಿ ಸರ್ಕಾರ ಮಾಡಿರುವಂತಹ ಯೋಜನೆಯ, ಕಾರ್ಯಗಳ ವಿಚಾರ ಸಂಕಿರ್ಣ ಮತ್ತು ಧ್ಯೆಯ ಉದ್ದೇಶಗಳ ಮಾಹಿತಿ ಕೊಡುವಂತಹ ಕಾರ್ಯಾಗಾರ ಹಮ್ಮಿಕೊಂಡಿದ್ದು ಇಂಡಿ ಕ್ಷೇತ್ರದ ಎಲ್ಲ ಕಾರ್ಯಕರ್ತರು ಸಂಕಿರ್ಣ ದಲ್ಲಿ ಪಾಲ್ಗೊಳುವಂತೆ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರು ಎಂ. ಎಸ್. ಲೋಣಿ ಮಾತನಾಡಿದರು.
ಝಳಕಿ ಪ್ರವಾಸಿ ಮಂದಿರದಲ್ಲಿ ಬಳ್ಳೊಳ್ಳಿ ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ, ಪ್ರಚಾರ ಸಮಿತಿಯ ಕೆ. ಪಿ. ಸಿ. ಸಿ. ಪದಾಧಿಕಾರಿಗಳು, ಜಿಲ್ಲಾ ಕಾಂಗ್ರಸ್ ಅಧ್ಯಕ್ಷರು ಹಾಗೂ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರ ನೇತೃತ್ವದಲ್ಲಿ ಜಿಲ್ಲಾ, ತಾಲೂಕಾ ಮತ್ತು ಗ್ರಾಮ ಪಂಚಾಯತ್ ಚುನಾವಣೆ ಕುರಿತು ವಿಚಾರ ಗೋಷ್ಠಿ ಚಾಲನ ನೀಡಿ ಮಾತನಾಡಿದರು.
ಶರಣಪ್ಪ ಕೋಟಗಿ ಮಾತನಾಡಿ ಬಿ. ಜೆ. ಪಿ. ಪಕ್ಷದ ಮುಖಂಡರು ಸುಳ್ಳಿನ, ವಿಷದ ಬೀಜವನ್ನು ಬಿತ್ತಿ ಜನರಿಗೆ ಉಣಬಡಿಸುತ್ತಿದ್ದಾರೆ, ಅದರಲ್ಲೂ ನಮ್ಮ ದೇಶದ ಪ್ರಧಾನಿಗಳು ಟ್ರಾಂಪ ಜ್ಯೋತೆ ಕೈಜೋಡಿಸಿ ತೆರಿಗೆಯಲ್ಲಿ ಭಾರಿ ಮೋಸ ಮಾಡುತ್ತಿದ್ದಾರೆ, ಶ್ರೀಮಂತರಿಗೆ ಮೇಲೆತ್ತಿ ಬಡವರಿಗೆ ನೆಲಕಚ್ಚುವಂತಹ ಕೆಲಸ ನಡೆಸಿದ್ದಾರೆ, ರೈತರಿಗೆ ಯಾವುದೇ ತರನಾದ ಸಹಾಯ ಮಾಡದೇ ಅನ್ಯಾಯ ವೆಸಗಿದ ಸರ್ಕಾರ ಬಿಜೆಪಿ ಸರ್ಕಾರ ಎಂದರು.
ಬಡವರ ಪರ, ರೈತರ ಪರ ಸರ್ಕಾರ ನಮ್ಮ ಕಾಂಗ್ರೆಸ್ ಸರ್ಕಾರ, ಬಡವರ, ರೈತರ ಶೈಕ್ಷಣಿಕ, ಆರ್ಥಿಕ ಉನ್ನತಿ ಬಯಸಿ ಇವತ್ತು ಪಂಚ ಗ್ಯಾರಂಟಿ ಯೋಜನೆ ಯಾವುದೇ ಅಡೆತಡೆ ಇಲ್ಲದೆ ಸಾಗಿಸಿದ್ದು ನಮ್ಮ ಸಿದ್ದರಾಮಯ್ಯ ಮತ್ತು ಡಿ. ಕೆ. ಸಿ ರವರ ನೇತೃತ್ವದ ಸರ್ಕಾರ, ಸಾಕಷ್ಟು ಯೋಜನೆಗಳು, ಮಾಡಿದ್ದೇವೆ, ಒಂದು ಸಮಯದಲ್ಲಿ ನಮ್ಮ ಜಿಲ್ಲೆ ಬರಡು ಜಿಲ್ಲೆಯಾಗಿತ್ತು, ಇವತ್ತು ಎಲ್ಲೆಂದರಲ್ಲಿ ಹಸಿರು ಹಸಿರಾಗಿ ರಾರಾಜಿಸುತ್ತಿದೆ, ಇದಕ್ಕೆಲ್ಲ ಸಿದ್ದರಾಮಯ್ಯ ರವರ ಸಹಕಾರ ಎಂದು ಸಂತೋಷ ವ್ಯಕ್ತಪಡಿಸಿದರು.
ಬಳ್ಳೊಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಬಿ. ಸಿ. ಸಾವಕಾರ ಮಾತನಾಡಿ ನಮ್ಮ ಸರ್ಕಾರ ಬಡವರಿಗೆ, ಬೀದಿ ವ್ಯಾಪಾರಸ್ಥರಿಗೆ, ಮಹಿಳೆಯರಿಗೆ ಸಾಕಷ್ಟು ಅನುಕೂಲ ಮಾಡಿಕೊಟ್ಟಿದೆ, ಮಹಿಳೆಯರಿಗೆ ಭಾಗ್ಯ ಲಕ್ಷ್ಮಿ, ಉಚಿತ ಬಸ್ಸ ಸೌಲಭ್ಯ, ಬಡವರಿಗೆ ಉಚಿತ ವಿದ್ಯುತ್, ವಿದ್ಯಾರ್ಥಿಗಳಿಗೆ ಯುವನಿಧಿ ಎಲ್ಲವು ಕೊಟ್ಟು ಒಳ್ಳೆಯ ಸಮಾಜ ಸೇವೆ ನಿರ್ವಹಿಸಿದೆ, ಇದೆಲ್ಲವೂ ಮಾಡೋದರ ಜ್ಯೋತೆಗೆ ನಮ್ಮ ಕಾರ್ಯಕರ್ತರನ್ನು ಸಹ ಮೇಲೇತ್ತುವ ಕೆಲಸ ಮಾಡಲಿ ಎಂದು ವಿನಂತಿಸಿಕೊಂಡರು, ಕಾರ್ಯಕರ್ತರು ಹಗಲು ರಾತ್ರಿ ಎನ್ನದೆ ದುಡಿದು ಪಕ್ಷದ ಬೆಳವಣಿಗೆ ಮಾಡಿದ್ದಾರೆ, ಅವರ ಕುಟುಂಬ ಚೆನ್ನಾಗಿದ್ದರೆ ಸಂತೋಷ ಎಂದರು, ನಾಳೆ ನಡೆಯುವ ಮಾರ್ಚ್ 8 ರಂದು ಎಲ್ಲ ಕಾರ್ಯಕರ್ತರು, ಪದಾಧಿಕಾರಿಗಳು ಪಕ್ಷದ ಮಾಹಿತಿ ಮತ್ತು ವಿಚಾರ ಗೋಷ್ಠಿಗೆ ಹಾಜರಾಗಿ, ಮುಂದಿನ ದಿನಗಳಲ್ಲಿ ಮತ್ತೆ ರಣಕಹಳೆ ಬಾರಿಸೋಣ ಎಂದು ಜೈ ಭೇರಿ ಘೋಷಣೆ ಹಾಕಿದರು.
ಈ ಸಂದರ್ಭದಲ್ಲಿ ಜಿ. ಎಸ್. ಮಹಾಬಳೇಶ್ವರ, ಎಂ. ಎಂ. ಮುಲ್ಲಾ, ಎಸ್. ಎಂ. ಮಿರ್ದೆ, ಆರ್ಮಿ ವಿಂಗ್ ವ್ಹಿ. ಪಾಟೀಲ್, ಎಸ್. ಬೆಂಟಿಗೇರಿ, ಸದಾಶಿವ ಮಠ್, ರಾಜ್ಯ ಎಸ್
ಸಿ& ಎಸ್. ಟಿ. ಘಟಕದ ಉಪಾಧ್ಯಕ್ಷರು ಸಣ್ಣಪ್ಪ ತಳವಾರ, ಗಣೇಶ್ ನಾಯಕ, ಪ್ರಶಾಂತ್ ಪೂಜಾರಿ, ಸುನಿಲ್ ಕ್ಷತ್ರಿ, ಅಬ್ದುಲ್ ಇಂಡೀಕರ, ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

0
0 views