ಬಾಲ್ಯ ಗರ್ಭಿಣಿ ಪ್ರಕರಣ
ಪ್ರಥಮ ವರದಿ ಸಲ್ಲಿಸಿ
ಪ್ರೋಕ್ಸೋ ಬಾಲ್ಯವಿವಾಹಬಾಲ
ಗರ್ಭಿಣಿಪ್ರಕರಣಗಳವಿಷಯದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹೆಚ್ಚಿನ ನಿಗಾವಹಿಸಬೇಕು. ಬಾಲಗರ್ಭಿಣಿ
ಪ್ರಕರಣವಿದ್ದಲ್ಲಿ ಬರೀ ಹೇಳಿಕೆ ನೀಡದೆ ಪ್ರಥಮವರ್ತಮಾನವರದಿಸಂಬಂಧ ಪಟ್ಟ ಠಾಣೆಗೆ ವರದಿ ಮಾಡಬೇಕೆಂದು ಕಲಬುರಗಿ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನು ಮ ಮೇಲ್ವಿಚಾರಣೆ ಸಮಿತಿ ಸಭೆಯಲ್ಲಿ ಸೂಚಿಸಿದರು.
2023ರ ಪ್ರೋಕ್ಸೋ ಪ್ರಕರಣದಲ್ಲಿ ಜೀವಾವಧಿ ಹಾಗೂ ಬಾಲ್ಯ ವಿವಾಹ ಪ್ರಕರಣಗಳಲ್ಲಿ ನ್ಯಾಯಾಲಯ, ಕುಟುಂಬದ ನಾಲ್ವರಿಗೆ ಶಿಕ್ಷೆ ವಿಧಿಸಿದೆ. ಸಂಬಂಧಪಟ್ಟ ಅಧಿಕಾರಿಗಳು ತಮ್ಮ ಅಧೀನದ ಕಚೇರಿ ಮತ್ತು ಮಕ್ಕಳ ವಸತಿ ನಿಲಯಗಳಿಗೆ ಆಕಸ್ಮಿಕ ಭೇಟಿ ನೀಡಿ ನಿಜವಾದ ವಿಷಯ ತಿಳಿಯಬಹುದು. ಅಧಿಕಾರಿಗಳು ಸಮನ್ವಯದಿಂದ ಕರ್ತವ್ಯ ನಿರ್ವಹಿಸಬೇಕೆಂದು ತಿಳಿಸಿದರು.
ಈ ಸಭೆಯಲ್ಲಿ ಸಿವಿಲ್ ನ್ಯಾಯಾಧೀಶ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀನಿವಾಸ್ ನವಲೆ, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ್ ಶಿಂಧೆ, ಹೆಚ್ಚುವರಿ ಎಸ್ಪಿ ಮಹೇಶ್ ಮೇಘಣ್ಣನವರ್, ಸಮಾಜ ಕಲ್ಯಾಣ ಅಧಿಕಾರಿ ಪ್ರೀತಿ ದೊಡ್ಡಮನಿ, ಡಿ ಎಚ್ ಓ ಡಾ. ಶರಣಬಸಪ್ಪ ಕ್ಯಾತನಾಳ, ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಶಂಕ್ರಮ್ಮ ಧವಳಗಿ ಇತರರು ಉಪಸ್ಥಿತರಿದ್ದರು.