ಪ್ರಧಾನಿಗೆ ಖರ್ಗೆ ಟೀಕೆ
ಸುಧಾ ಹಾಲ್ಕಾಯಿ ಖಂಡನೆ
ಸಚಿವ ಪ್ರಿಯಾಂಕ ಖರ್ಗೆ ಸದನದಲ್ಲಿ ಪ್ರಧಾನಿ ಮೋದಿ ಅವರನ್ನು ಹೇಡಿ ಎಂದು ಕೀಳು ಭಾಷೆ ಬಳಸಿ ಅವಮಾನಿಸಿದ್ದು ಖಂಡನೀಯ ಎಂದು ರಾಜ್ಯ ಬಿಜೆಪಿ ವಕ್ತಾರೆ ಡಾ. ಸುಧಾ ಆರ್ ಹಾಲ್ಕಾಯಿ ಖಾರವಾಗಿ ನುಡಿದರು. ಬೆಳೆ ಹಾನಿಯಾಗಿ ರಾಜ್ಯದ ರೈತರು ಆರ್ಥಿಕ ಸಂಕಷ್ಟದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಇದು ಗೊತ್ತಾಗುತ್ತಿಲ್ಲವೇ ಕಲಬುರಗಿ ಜೈಲಲ್ಲಿ ಕೈದಿಗಳಿಗೆ ರಾಜಾತಿಥ್ಯ ಸೌಲಭ್ಯಕೊಡಲಾಗುತ್ತಿದ್ದುಯಾವಪುರುಷಾರ್ಥಕ್ಕೆ ಎಂದು ಕಿಡಿಕಾರಿ ರಾಜ್ಯಕ್ಕೆ ಶೂನ್ಯ ಕೊಡುಗೆ ನೀಡುವ ಇವರು ಕೆಲಸಕ್ಕೆ ಬಾರದ ವಿಷಯ ಮಾತಾಡುವುದು ಸರಿಯಲ್ಲಎಂದರು