ಬನ್ನಿಕೋಡಿನ ಸರ್ಕಾರಿ ಪ್ರೌಢ ಶಾಲೆಯಲ್ಲಿ 2003ನೇ ಸಾಲಿನ ಹಳೆಯ ವಿದ್ಯಾರ್ಥಿಗಳಿಂದ “ಗುರುವಂದನಾ ಮತ್ತು ಸ್ನೇಹ ಸಮ್ಮಿಲನ
ಬನ್ನಿಕೋಡಿನ ಸರ್ಕಾರಿ ಪ್ರೌಢ ಶಾಲೆಯಲ್ಲಿ 2003ನೇ ಸಾಲಿನ ಹಳೆಯ ವಿದ್ಯಾರ್ಥಿಗಳಿಂದ “ಗುರುವಂದನಾ ಮತ್ತು ಸ್ನೇಹ ಸಮ್ಮಿಲನದಿನಾಂಕ 25-01-2026 ರಂದು ಬನ್ನಿಕೋಡಿನ ಸರ್ಕಾರಿ ಪ್ರೌಢ ಶಾಲೆಯಲ್ಲಿ 2003ನೇ ಸಾಲಿನ ಹಳೆಯ ವಿದ್ಯಾರ್ಥಿಗಳಿಂದ “ಗುರುವಂದನಾ ಮತ್ತು ಸ್ನೇಹ ಸಮ್ಮಿಲನ” ಕಾರ್ಯಕ್ರಮವನ್ನು ಆತ್ಮೀಯವಾಗಿ ಆಯೋಜಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಪ್ರಸ್ತುತ ಮುಖ್ಯೋಪಾಧ್ಯಾಯರಾದ ಕೊಟ್ರೇಶಪ್ಪ ವಿ. ಬಿ. ಅವರು ವಹಿಸಿದ್ದರು. ವೇದಿಕೆಯಲ್ಲಿ ನಿವೃತ್ತ ಹಾಗೂ ಸೇವೆಯಲ್ಲಿರುವ ಗೌರವಾನ್ವಿತ ಶಿಕ್ಷಕರು, ಹಳೆಯ ವಿದ್ಯಾರ್ಥಿಗಳು ಮತ್ತು ಗಣ್ಯ ಅತಿಥಿಗಳು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು.ಕಾರ್ಯಕ್ರಮದ ಆರಂಭದಲ್ಲಿ ಪರಿಮಳ ಮತ್ತು ಸಂಗಡಿಗರು ಪ್ರಾರ್ಥನೆ ಸಲ್ಲಿಸಿದರು. ನಂತರ ಉಚ್ಛಗಮ್ಮ (ಉಮಾ) ಅವರಿಂದ ಸ್ವಾಗತ ಭಾಷಣ ಹಾಗೂ ನಿರೂಪಣೆ ನಡೆಯಿತು. ಅಶೋಕಗೌಡ ಜಿ. ಎನ್. ಅವರು ವಾಸ್ತವಿಕ ನುಡಿಯಲ್ಲಿ ಗುರುಗಳ ಸೇವೆಯ ಮಹತ್ವವನ್ನು ವಿವರಿಸಿದರು. ಕಾರ್ಯಕ್ರಮದ ಅಂತ್ಯದಲ್ಲಿ ಚಂದ್ರಶೇಖರ ಜಿ. ಸಿ. ಅವರು ವಂದನಾರ್ಪಣೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಸನ್ಮಾನಿತ ಶಿಕ್ಷಕರಾದ ಟಿ. ಚನ್ನಬಸಪ್ಪ, ಎಸ್. ಪಿ. ಚಂದ್ರಪ್ಪ, ಎಚ್. ಆರ್. ಸುಧಾ, ಕೆ. ಓ. ಸುಧಾ, ಪ್ರಭು, ಶಿವಪ್ರಕಾಶ್ ಹಾಗೂ ಮಂಜಮ್ಮ (ಹಣ್ಣು ಮಾರುವವರು) ಅವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.ಹಳೆಯ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದ ಸ್ಮೃತಿಗಳನ್ನು ಹಂಚಿಕೊಂಡು, ಗುರುಗಳ ತ್ಯಾಗ, ಶ್ರಮ ಮತ್ತು ಸಂಸ್ಕಾರಮಯ ಶಿಕ್ಷಣಕ್ಕೆ ಕೃತಜ್ಞತೆ ಸಲ್ಲಿಸಿದರು. ಸ್ನೇಹ ಸಮ್ಮಿಲನದ ಮೂಲಕ ಹಳೆಯ ಸ್ನೇಹಿತರು ಮತ್ತೆ ಒಂದಾಗಿ ಸಂಭ್ರಮಿಸಿದರು. ಅಭಿನಂದನಾ ಭಾಷಣಗಳು ಹಾಗೂ ಅನುಭವ ಹಂಚಿಕೆಗಳಿಂದ ಕೂಡಿದ ಈ ಕಾರ್ಯಕ್ರಮವು ಸೌಹಾರ್ದತೆ ಮತ್ತು ಭಾವನಾತ್ಮಕ ವಾತಾವರಣದಲ್ಲಿ ಯಶಸ್ವಿಯಾಗಿ ನೆರವೇರಿತು. ಗುರು–ಶಿಷ್ಯ ಸಂಬಂಧದ ಮಹತ್ವವನ್ನು ನೆನಪಿಸುವ ಈ ಕಾರ್ಯಕ್ರಮ ಹಳೆಯ ವಿದ್ಯಾರ್ಥಿಗಳ ಒಗ್ಗಟ್ಟು ಮತ್ತು ಕೃತಜ್ಞತೆಯ ಸಂಕೇತವಾಗಿ ಎಲ್ಲರ ಗಮನ ಸೆಳೆಯಿತು.