ಕಮಲಾಪುರ್ ಎಫ್ ಡಿ ಎ ಶಶಿಕಾಂತ್ ಲೋಕಾಯುಕ್ತ ಬಲೆಗೆ ಬಂಧನ
ಕಲಬುರಗಿ ಜಿಲ್ಲೆ, ಕಮಲಾಪುರ್ ತಾಲೂಕಿನ ತಹಸೀಲ್ ಕಚೇರಿಯಲ್ಲಿ ಎಫ್ ಡಿ ಎ ಯಾಗಿ ಕೆಲಸ ನಿರ್ವಹಿಸುತ್ತಿದ್ದ ಶಶಿಕಾಂತ್ ಜಂಜಿರ ಈತನು ಕೇಶು ರಾಥೋಡ್ ಎಂಬಾತನಿಂದ ಜಮೀನು ವ್ಯಾಜ್ಯದ ಸಂಬಂಧ 10,000 ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ದಾಳಿಗೆ ಸಿಲುಕಿದ ಹಿನ್ನೆಲೆ ಲೋಕಾಯುಕ್ತ ಇನ್ಸ್ಪೆಕ್ಟರ್ ಅಶೋಕ್ ಮುರಗುಂಡಿ ಅವರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿ ಕಾನೂನು ಕ್ರಮ ಕೈಕೊಂಡಿದ್ದಾರೆಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.