logo

ಪಶ್ಚಿಮ ಬಂಗಾಳದಲ್ಲಿ ಇ ಡಿ ದಾಳಿಗೆ ಮಮತಾ ಬ್ಯಾನರ್ಜಿ ಎದುರೇಟು ವ್ಯಾಪಕ ಪ್ರತಿಭಟನೆ ದಿಲ್ಲಿಯಲ್ಲೂ ಸದ್ದು

2026ರಲ್ಲಿ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಎದುರಿಸಲಿದೆ ಈ ಚುನಾವಣೆಯ ಬಿಸಿ ಏರುತ್ತಿರುವಾಗಲೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಇ ಡಿ ದಾಳಿ ಶಾಕ್ ಎದುರಾಗಿದೆ. ನಾಲ್ಕನೇ ಬಾರಿಯೂ ತಾನು ಪುನಹ ಸಿಎಂ ಆಗಿ ಅಧಿಕಾರ ವಹಿಸುವ ಕನಸು ಕಾಣುತ್ತಿರುವ ಇವರಿಗೆ ಗಂಡಾಂತರ ಬಂದೊದಗಿದೆ. ಕಲ್ಲಿದ್ದಲು ಹಗರಣ ಸಂಬಂಧ ಆಕ್ರಮಣ ವರ್ಗಾವಣೆ ತನಿಖೆಯು ಇ ಡಿ ಚುರುಕುಗೊಳಿಸದ ಬೆನ್ನಲ್ಲೇ ದಾಳಿ ನಡೆಸಿದ ಸ್ಥಳಕ್ಕೆ ಅವರು ಹೋಗಿ ಇಡಿ ತನಿಖೆಗೆ ಅಡ್ಡಿಗೊಳಿಸಿದರೆಂದು ಹೇಳಲಾಗಿದೆ.
ಈ ದಾಳಿಯ ಹಿಂದೆ ಬಿಜೆಪಿಯ ಕೈವಾಡವಿದೆ ಎಂದು ಟಿಎಂಸಿಯ ಕೆಲವರು ಸಂಸದರು ದಿಲ್ಲಿಯ ಕೇಂದ್ರೀಯ ಗೃಹಮಂತ್ರಿ ಅಮಿತ್ ಷಹ ಮನೆ ಮುಂದೆ ಧರಣಿ ನಡೆಸಿದ ಪ್ರಸಂಗವೊಂದುದು ನಡೆದಿದ್ದು ಈ ಧರಣಿಯಲ್ಲಿ ಅನೇಕ ಸಂಸದರನ್ನು ಪೊಲೀಸರು ವಶಪಡೆದರೆನಲಾಗಿದೆ.
ಐ ಪ್ಯಾಕ್ ಇದರರ್ಥ ಇಂಡಿಯನ್ ಪೊಲಿಟಿಕಲ್ ಆಕ್ಷನ್ ಕಮಿಟಿ ಇದೊಂದು ರಾಜಕೀಯ ಕಾರ್ಯತಂತ್ರ ರೂಪಿಸುವ ಮಹತ್ವದ ಸಂಸ್ಥೆಯಾಗಿದೆ. ಪ್ರಶಾಂತ್ ಕಿಶೋರ್ ಮತ್ತು ಅವರನ್ನು ಒಳಗೊಂಡ ತಂಡ ರಾಜಕೀಯ ಪಕ್ಷಗಳ ಚುನಾವಣೆ ಜಯಿಸಲು ಡೇಟಾ ವಿಶ್ಲೇಷಣೆ ಹಾಗೂ ಸಾಮಾಜಿಕ ಜಾಲತಾಣ ನಿರ್ವಹಣೆ ಅಲ್ಲದೆ ಜನರ ಮನೋಭಾವನೆ ತಿಳಿಯುವ ಮುಖ್ಯ ತಂತ್ರಗಾರಿಕೆ ಇದು ಹೊಂದಿದೆ ಎನ್ನಲಾಗಿದೆ. ನಂತರದ ಬೆಳವಣಿಗೆಯಲ್ಲಿ ಪ್ರಶಾಂತ್ ಕಿಶೋರ್ ಐ ಪ್ಯಾಕ್ ನಿಂದ ಆಚೆ ಬಂದ ನಂತರ ಪ್ರತೀಕ್ ಜೈನ್ ಸಂಸ್ಥೆಯ ಒಬ್ಬ ಪ್ರಮುಖ ನಿರ್ದೇಶಕರಾದರು.
ಇತ್ತೀಚಿಗೆ ಟಿಎಂಸಿ ಪಕ್ಷದ ರಾಜಕೀಯ ತಂತ್ರಗಾರಿಕೆ ಸಂಸ್ಥೆ ಐ ಪ್ಯಾಕ್ ಹಾಗೂ ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ಹಠಾತ್ತನೆ, ದಾಳಿ ನಡೆಸಿತು. ಸುದ್ದಿ ತಿಳಿದ ತಕ್ಷಣ ಮಮತಾ ದಿದಿ ಇಡಿ ದಾಳಿ ನಡೆಸಿದ ಸ್ಥಳಕ್ಕೆ ಹೋಗಿ ಸರಕಾರದ ಕಾರ್ಯಕ್ಕೆ ಅಡ್ಡಿಗೊಳಿಸಿ ಇ ಡಿ ಅಧಿಕಾರಿಗಳಿಂದ ಹಸಿರು ಫೈಲ್ ಒಂದು ಕಸಿದುಕೊಂಡು ಬಂದ ಸುದ್ದಿ ದೇಶಾದ್ಯಂತ ಗುಲ್ಲೆಬ್ಬಿಸಿದೆ. ಎಲ್ಲಿ ತನ್ನನ್ನು ಕೇಂದ್ರ ಸರ್ಕಾರ ಇ ಡಿ ಬಂಧಿಸುತ್ತದೆ ಎಂಬ ಭುಗಿಲಿನಿಂದ ನನ್ನನ್ನು ಬಂಧಿಸಿದರೆ ನಿಮ್ಮನ್ನು ಪಾತಾಳಕ್ಕೆ ತಳ್ಳುತ್ತೇನೆ ಎಂದು ಹೇಳಿ ಅಸಂಖ್ಯಾತ ಜನರೊಂದಿಗೆ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಒಬ್ಬ ಮುಖ್ಯಮಂತ್ರಿ ಆಗಿ ಕೇಂದ್ರ ಸರ್ಕಾರದ ಇಡಿ ಕಾರ್ಯಾಚರಣಕ್ಕೆ ಅಡ್ಡಿಗೊಳಿಸುವುದು ಎಷ್ಟು ಸಮಂಜಸ.

10
875 views