logo

ವಿಜಿಬಿ ರಾಮಜಿ ಕಾಯಿದೆ ಬಗ್ಗೆ ಖರ್ಗೆ ಅಪಪ್ರಚಾರ ಬಿಜೆಪಿ ವಕ್ತಾರ ಚಂದ್ರಶೇಖರ್ ಆರೋಪ

ವಿಜಿಬಿ ರಾಮಜಿ ಕಾಯಿದೆ ಸಂವಿಧಾನ ವಿರೋಧಿಯಾಗಿದೆ ಇದರ ವಿರುದ್ಧ ರಾಜ್ಯ ಸರ್ಕಾರ ಕಾನೂನು ಸಮರ ಸಾರಲಿದೆ, ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನರೆಗಾ ಯೋಜನೆ ಅಡಿ ಅವ್ಯವಹಾರ ಆಗಿರೋದ್ರಿಂದ ಹೊಸ ಕಾಯ್ದೆ ಜಾರಿಗೆ ಆಗಿದೆ ಹೀಗಾಗಿ ಕಾಂಗ್ರೆಸ್ ಸರ್ಕಾರ ವಿರೋಧಿಸುತ್ತಿದೆ ಎಂಬ ಬಿಜೆಪಿ ಹೇಳಿಕೆಗೆ ತಿರುಗೇಟು ನೀಡಿದರು. ಸಾವಿರಾರು ಕುಟುಂಬಗಳ ನಿರ್ವಹಣೆ ನಡೆಯುತ್ತಿದ್ದ ಇಂತಹ ಯೋಜನೆಯಲ್ಲಿ ಕೆಲವು ತಪ್ಪಾಗಿರೋದು ಪ್ರಶ್ನಿಸಿ ಇಡೀ ಯೋಜನೆ ರದ್ದುಗೊಳಿಸಿರುವುದು ಖಂಡನೀಯ ಎಂದು ಪ್ರಿಯಾಂಕ ಖರ್ಗೆ ಖಾರವಾಗಿ ನುಡಿದರು.
11 ವರ್ಷಗಳ ಅಧಿಕಾರದಲ್ಲಿರುವ ಬಿಜೆಪಿ ಕೇಂದ್ರ ಸರ್ಕಾರ, ಒಂದು ವೇಳೆ ನರೇಗಾದಲ್ಲಿ ಭ್ರಷ್ಟಾಚಾರ ನಡೆದಿದ್ದರೆ ಈ ಹಿಂದೆ ಯಾಕೆ ಪ್ರಶ್ನಿಸಲಿಲ್ಲ ಎಂದ ಅವರು 20 ವರ್ಷಗಳಿಂದ ನರೇಗಾ ಜಾರಿಯಲ್ಲಿದೆ ಬಿಜೆಪಿ ಮೊದಲಿನಿಂದಲೂ ಮೀಸಲು ವಿರೋಧಿಯಾಗಿದೆ ಒಳ ಮೀಸಲಾತಿ ತೀರ್ಮಾನಿಸುವುದು ರಾಜ್ಯ ಸರ್ಕಾರಗಳ ವಿವೇಚನೆಗೆ ಬಿಟ್ಟಿದೆ ವಿನಾಕಾರಣ ಬಿಜೆಪಿ ಮೂಗುಸೂಸುತ್ತಿದೆ. ಇದು ಅಧಿಕ ಪ್ರಸಂಗ ತನ್ನವಲ್ಲವೇ ಎಂದು ಪ್ರಿಯಾಂಕ ಖರ್ಗೆ ಬಿಜೆಪಿಯ ರಣನೀತಿಗೆ ಟಾಂಗ್ ಎಳೆದರು.
ಕಲಬುರಗಿ ಉಸ್ತುವಾರಿ ಸಚಿವ ಖರ್ಗೆ ಹೇಳಿಕೆಗೆ ಕೌಂಟರ್ ನೀಡಿದ ಭಾರತೀಯ ಜನತಾ ಪಕ್ಷದ ಜಿಲ್ಲಾ ವಕ್ತಾರ ಚಂದ್ರಶೇಖರ್ ಪರಸ್ರೆಡ್ಡಿ ವಿಜಿಬಿ ರಾಮಜಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಬಗ್ಗೆ ಪ್ರಿಯಾಂಕ ಖರ್ಗೆ ಸುಳ್ಳು ಹೇಳುವ ಮೂಲಕ ಅಪಪ್ರಚಾರ ಮಾಡುತ್ತಿದ್ದಾರೆ. ಬಡವರು ಕೂಲಿ ಕಾರ್ಮಿಕರಿಗೆ ತಪ್ಪು ಸಂದೇಶ ರವಾನಿಸುತ್ತಿದ್ದಾರೆ. ಮೊದಲು ಉದ್ಯೋಗ ಖಾತ್ರಿ ಯೋಜನೆ 100 ದಿನಗಳದಾಗಿರುತ್ತಿತ್ತು. ಬಿಜೆಪಿ ಸರ್ಕಾರ ಇದನ್ನು 125 ದಿನಗಳವರೆಗೆ ಮುಂದುವರಿಸಿ ಕೂಲಿ ಕಾರ್ಮಿಕರ ಬಾಳಲ್ಲಿ ಹೊಸ ಬೆಳಕು ಮೂಡಿಸಿದಂತಾಗಿದೆ ಎಂದು ಅವರು ನೋಡಿದರು.

98
2542 views