logo

ಕಲ್ಯಾಣ ಕರ್ನಾಟಕಕ್ಕೆ ಶಿಕ್ಷಕರ ನೇಮಕಾತಿಯಲ್ಲಿ ಸರಕಾರದ ಮೀನಮೇಶ

ಕಲಬುರಗಿಯ ಕಲ್ಯಾಣ ಕರ್ನಾಟಕದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಬಹುತೇಕ ನೆಲಕಚ್ಚಲು ಕಾರಣ ಶಿಕ್ಷಕರ ನೇಮಕಾತಿ ಕೊರತೆ, ಶಿಕ್ಷಕರ ಅಭಾವದಿಂದ ವಿದ್ಯಾರ್ಥಿಗಳಿಗೆ ಸರಿಯಾದ ಬೋಧನೆ ಸಿಗುತ್ತಿಲ್ಲ , ಹೀಗಾಗಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಫಲಿತಾಂಶ ನಿರೀಕ್ಷೆಗಿಂತ ಬಹಳ ಕಡಿಮೆಯಾಗಿದೆ ಎಂದು ಹೇಳಿ ಶಿಕ್ಷಕರ ನೇಮಕಾತಿಯಲ್ಲಿ ಕಾಂಗ್ರೆಸ ಸರಕಾರ ಮೀನಮೇಶ ಮಾಡುತ್ತಿದೆ ಎಂದು ವಿಧಾನಪರಿಷತ್ ಸದಸ್ಯ ಸರಕಾರದ ಧೋರಣೆಗೆ ಬಲವಾಗಿ ಖಂಡಿಸಿದರು.
1934ರಲ್ಲಿ ಪ್ರತ್ಯೇಕ ಕನ್ಯಾ ಶಾಲೆ ಪ್ರಾರಂಭಿಸಿ ಹೆಣ್ಣು ಮಕ್ಕಳಿಗೆ ಶಿಕ್ಷಣದ ಸೌಲಭ್ಯ , ಶರಣಬಸವ ಸಂಸ್ಥಾನದ 7ನೇಯ ಪೀಠಾಧಿಪತಿ ಶ್ರೀ ದೊಡ್ಡಪ್ಪ ಅಪ್ಪ ಅವರು ಕಲ್ಪಿಸಿ ಮಹಿಳೆಯರಿಗೆ ಉತ್ತಮ ಗುಣಮಟ್ಟದ ಶಿಕ್ಷಣದ ಬಗ್ಗೆ ಕನಸು ಕಂಡಿದ್ದರು ಎಂದು ನಮೋಶಿ ಸಾವಿತ್ರಿಬಾಯಿ ಫೂಲೆ ಯವರ ಜನ್ಮೋತ್ಸವ ನಿಮಿತ್ಯ ಶರಣಬಸವೇಶ್ವರ ಸಂಸ್ಥಾನ ಅಖಿಲ ಭಾರತ ಶಿವಾನುಭವ ಮಂಟಪದಲ್ಲಿ ಸಮಾರಂಭದ ಉದ್ಘಾಟಕರಾಗಿ ಆಗಮಿಸಿ ಮಾತನಾಡುತ್ತಿದ್ದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಲಬುರಗಿಯ ಜನಪ್ರಿಯ ಕಾಂಗ್ರೆಸ್ ನಾಯಕ ಅಲ್ಲಮಪ್ರಭು ಪಾಟೀಲ್ ಮಾತನಾಡಿ ಬುದ್ಧ ಬಸವ ಅಂಬೇಡ್ಕರ್ ತತ್ವಗಳ ಸಿದ್ದಾಂತದಡಿ ಪುರುಷರಷ್ಟೇ ಸ್ತ್ರೀಯರು ಎಲ್ಲಾ ಅವಕಾಶಗಳಿಗೆ ಸರಿ ಸಮಾನರು ಸಂವಿಧಾನ ಅವರಿಗೆ ಎಲ್ಲಾ ಹಕ್ಕುಗಳು ನೀಡಿದೆ. ದೇಶದ ಪ್ರಮುಖ ಹುದ್ದೆಗಳಾದ ರಾಷ್ಟ್ರಪತಿ ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿ ಸ್ಥಾನಗಳನ್ನು ಅಲಂಕರಿಸುವ ಹಕ್ಕು ನೀಡಿದೆ ಎಂದರು.
ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಬಾಬುರಾವ್ ಕುಲಕರ್ಣಿ ,ಅಮರ್ ಸಿಂಗ್ ಠಾಕೂರ್, ಡಾ. ಶಿಲ್ಪಾ ಬಿರಾದಾರ್ , ಡಾ. ಬಿ ವಿ ನೂಲಾ, ಮಲ್ಲಮ್ಮ ಪಟ್ಟಣಕರ್, ಅನ್ನಪೂರ್ಣ ಶಿವಶರಣಪ್ಪ ಮಂಠಾಳ, ರಾಜಶೇಖರ್ ಗೌರೇ, ವೀರೇಂದ್ರ ಪಾಟೀಲ್, ಉದಯ್ ಕುಮಾರ್ ಇತರರಿಗೆ ಸಾವಿತ್ರಿಬಾಯಿ ಫುಲೆ ಮತ್ತು ಜ್ಯೋತಿಬಾಪುಲೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಶರಣಬಸವ ವಿವಿ ಡೀನ್ ಲಕ್ಷ್ಮಿ ಬಾಯಿ ಪಾಟೀಲ್ ಮಾಕಾ, ನವದೆಹಲಿ ಇಂಡಿಯಾ ಆಫ್ರಿಕಾ ಟ್ರೇಡ್ ಕೌನ್ಸಿಲ್ ಚೇರ್ಮನ್ ಅಮರ್ಸಿಂಗ್ ಠಾಕೂರ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪ ನಿರ್ದೇಶಕಿ ಶಂಕ್ರಮ್ಮ ಧವಳಗಿ, ರಾಜ್ಯ ವೀಮಾ ಇಲಾಖೆ ಉಪ ನಿರ್ದೇಶಕ ರಾಜಶೇಖರ್ ಗೌರೆ, ಸರ್ಕಾರಿ ಮಹಿಳಾ ನೌಕರರ ಸಂಘದ ಜಿಲ್ಲಾಧ್ಯಕ್ಷೆ ನಂದಿನಿ ಸನ್ ಬಾಲ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ವಿಜಯಕುಮಾರ್ ತೇಗಲ್ತಪ್ಪಿ , ಎಸ್ ಸಿ ಎಸ್ ಟಿ ನೌಕರ ಸಂಘದ ಅಧ್ಯಕ್ಷ ಮಹೇಶ್ ಹುಬ್ಬಳ್ಳಿ , ಎಸ್ಪಿ ಸುಳ್ಳದ್, ರೇಣುಕಾ ಡಾಂಗೆ ಇತರರು ಉಪಸ್ಥಿತರಿದ್ದರು.

30
676 views