logo

*ಅಕ್ಷರಮಾತೆ *ಜಯಂತ್ಯೋತ್ಸವ ಹಾಗೂ ಯಶಸ್ವಿಯಾದ ಪೋಷಕರ ಸಭೆ*

*ಅಕ್ಷರಮಾತೆ ಜಯಂತ್ಯೋತ್ಸವ ಹಾಗೂ ಯಶಸ್ವಿಯಾದ ಪೋಷಕರ ಸಭೆ*
ನಂದವಾಡಗಿ ೩ - ಬಾಗಲಕೋಟೆ ಜಿಲ್ಲೆಯ ಹುನಗುಂದ / ಇಲಕಲ್ ತಾಲೂಕಿನ ಬಾಲಕಿಯರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂದವಾಡಗಿಯಲ್ಲಿ 2025- 26 ನೇ ಸಾಲಿನ ಎರಡನೇ ಪೋಷಕರ ಶಿಕ್ಷಕರ ಸಭೆ ಹಾಗೂ ಭಾರತ ದೇಶದ ಮೊದಲ ಮಹಿಳಾ ಶಿಕ್ಷಕಿ ಅಕ್ಷರ ಮಾತೆ ಸಾವಿತ್ರಿ ಬಾಯಿ ಫುಲೆ ರವರ ಜಯಂತಿ ಬಹಳ ಅದ್ದೂರಿ ಹಾಗೂ ಅರ್ಥ ಪೂರ್ಣವಾಗಿ ಜರುಗಿತು. ವಿದ್ಯಾರ್ಥಿನಿಯರು ಪಾಲಕರನ್ನು ಅದ್ದೂರಿಯಾಗಿ ಸ್ವಾಗತ ಮಾಡಿ ಗ್ರೀಟಿಂಗ್ ನೀಡಿ ಕರೆ ತಂದರು. ಪೋಷಕ ಶಿಕ್ಷಕರ ಸಭೆಯ ಅಧ್ಯಕ್ಷ ಸ್ಥಾನವನ್ನು ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು ಶ್ರೀಮತಿ ಜಯಶ್ರೀ ವಗ್ಗರ ವಹಿಸಿಕೊಂಡು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಶಾಲೆಯ ಮುಖ್ಯ ಗುರುಮಾತೆ ಶ್ರೀಮತಿ ವಿ ಬಿ ಕುಂಬಾರ ವಹಿಸಿಕೊಂಡು ಪ್ರಾಸ್ತವಿಕವಾಗಿ ಮಾತನಾಡಿ ದರು. ಅತಿಥಿಗಳಾಗಿ ಎಸ್ ಡಿ ಎಮ್‌ ಸಿ ಸದಸ್ಯರು ಶ್ರೀ ಶಿವಪ್ಪ ಕೆ ವಹಿಸಿದ್ದರು. ಸಭೆಯಲ್ಲಿ ಸಭೆಯ ಉದ್ದೇಶ ಹಾಗೂ ಮಹತ್ವ, ಕಲಿಕಾ ಪ್ರಗತಿ, ಪರೀಕ್ಷೆಯ ಸಮಯ, ಕಲಿಕೆಗಾಗಿ ಪಾಲಕರ ಸಹಕಾರ, ಸರಕಾರ ನೀಡುತ್ತಿರುವ ಉಚಿತ ಸೌಲಭ್ಯಗಳು, ದಾಖಲಾತಿ ಆಂದೋಲನ ಮುಂತಾದ ವಿಷಯಗಳ ಬಗ್ಗೆ ಚರ್ಚೆಯಾದವು. ಅಕ್ಷರಮಾತೆ ಜಯಂತಿಯ ಬಗ್ಗೆ ಸಂಜನಾ ಹೊರಗಿನಮನಿ, ಅರ್ಚನಾ ಹೂಲಗೇರಿ ಮಾತನಾಡಿದರು. ಬಸಮ್ಮ ಹಂಚಿನಾಳ ಅಕ್ಷರದವ್ವನ ವೇಷಭೂಷಣ ಹಾಕಿಕೊಂಡು ಗಮನ ಸೆಳೆದರು. ಭಾಗ್ಯ ಈಟಿ ಮಕ್ಕಳ ಕಲಿಕಾ ಚಟುವಟಿಕೆ ಹಾಗೂ ಪ್ರತಿಭೆಯನ್ನು ಪಾಲಕರು ವೀಕ್ಷಿಸಿ ಪ್ರಶಂಸನೀಯ ಮಾತುಗಳನ್ನು ವ್ಯಕ್ತಪಡಿಸಿದರು. ಅತಿ ಹೆಚ್ಚು ಮಗ್ಗಿ ಹೇಳಿದ ಮಕ್ಕಳಿಗೆ ಮಗ್ಗಿ ರಾಣಿ ಎಂದು ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೆ ವೇಳೆ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಮಕ್ಕಳಿಗೆ ಅಭಿನಂದನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಬಹಳಷ್ಟು ಪಾಲಕರು ಹಾಗೂ ಪೋಷಕರು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಪೋಷಕರಿಗೆ ಮನರಂಜನಾ ಆಟ ಆಡಿಸಿ ಬಹುಮಾನ ನೀಡಿದ್ದು ಸಭೆಗೆ ಮೆರುಗು ತಂದಿತು. ಸಭೆಯಲ್ಲಿ ಶಾಲೆಯ ಶಿಕ್ಷಕ ವೃಂದ ಜಿ ಆರ್ ನದಾಫ್, ಜ್ಯೋತಿ, ಎಸ್ ಬಿ ಮಲಗಿಹಾಳ, ಬಸವರಾಜ ಬಲಕುಂದಿ, ಡಾ. ವಿಶ್ವನಾಥ ತೋಟಿ, ಚಂದ್ರಶೇಖರ ಹುತಗಣ್ಣ, ಅಶ್ವಿನಿ ಕಪ್ಪರದ ಹಾಗೂ ಮಂತ್ರಿ ಮಂಡಲ, ವಿದ್ಯಾರ್ಥಿನಿಯರು, ಪಾಲಕರು, ಪೋಷಕರು ಇತರರಿದ್ದರು. ಬಸವರಾಜ ಬಲಕುಂದಿ ಕಾರ್ಯಕ್ರಮ ನಿರೂಪಿಸಿದರು, ಡಾ. ವಿಶ್ವನಾಥ ತೋಟಿ ಸ್ವಾಗತಿಸಿದರು, ಚಂದ್ರಶೇಖರ ಹುತಗಣ್ಣ ವಂದಿಸಿದರು.

ವರದಿ ದಾವಲ್ ಶೇಡಂ

34
2780 views