logo

ಬೀದರ್ ಪಾಪನಾಶ್ ಅಭಿವೃದ್ಧಿ ತಡೆಗೆ ಸಚಿವ ಈಶ್ವರ ಖಂಡ್ರೆ ಕಾರಣ : ಆರೋಪ

ಬೀದರ್ ನಗರದ ಪಾಪನಾಶ ಲಿಂಗ ದೇವಸ್ಥಾನದ ಅಭಿವೃದ್ಧಿ ಕಾರ್ಯಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಿದ್ದು , ಪುನಃ ಈಗ ಸಚಿವ ಈಶ್ವರ್ ಖಂಡ್ರೆ ಪೂಜೆ ನೆರವೇರಿಸಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಮೇಲೆ ಕಾಮಗಾರಿ ಆರಂಭಿಸಲು ಒತ್ತಾಯಿಸುತ್ತಿದ್ದಾರೆ ಇದರಿಂದ ಪ್ರಗತಿ ಕಾರ್ಯಕ್ಕೆ ಹಿಂದೇಟಾಗಿದೆ ಎಂದು ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಶಿಧರ್ ಹೊಸಳ್ಳಿ ಮತ್ತು ಗ್ರಾಮಾಂತರ ಮಂಡಲ ಅಧ್ಯಕ್ಷ ದೀಪಕ್ ಗಾದಗಿ ನೇತೃತ್ವದಲ್ಲಿ ಮಂಡಲದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರಿಗೆ ಭೇಟಿಯಾಗಿ ಮನವಿ ಸಲ್ಲಿಸಿ ಪ್ರಗತಿ ಕಾರ್ಯ ಶೀಘ್ರ ಆರಂಭಿಸಬೇಕೆಂದು ಒತ್ತಾಯಿಸಿದ್ದಾರೆ.
ಮಾಜಿ ಸಚಿವ ಬಿಜೆಪಿಯ ಭಗವಂತ ಖುಬಾ ಮಂಜೂರು ಮಾಡಿಸಿದ ಅಭಿವೃದ್ಧಿ ಕೆಲಸಗಳು ತಾನು ಮಾಡಿಸಿದ್ದು ಎಂದು ಹೇಳಿ ಬೀಗುತ್ತಿರುವ ಸಚಿವ ಖಂಡ್ರೆ ಅವರ ನಡೆ ನಾಚಿಕೆಗೇಡಿತನ ವಾಗಿರುದೆಂದು ತಿಳಿಸುತ್ತಾ ಕಾಮಗಾರಿಯ ಏಜೆನ್ಸಿ ಮತ್ತು ಅನುದಾನ ಫಿಕ್ಸ್ ಆಗಿ ಬಿಡುಗಡೆ ಯಾಗಿದೆ ಒಂದು ವಾರದೊಳಗೆ ಈ ಕಾಮಗಾರಿ ಆರಂಭಗೊಳಿಸಬೇಕು, ಇಲ್ಲದಿದ್ದಲ್ಲಿ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಗಣೇಶ್ ಭೋಸ್ಲೆ , ರಾಜೇಂದ್ರ ಪೂಜಾರಿ, ರೋಷನ್ ವರ್ಮಾ, ಸುಭಾಷ್ ಮಡಿವಾಳ, ನವೀನ್ ಚಿಟ್ಟಾ , ಸಂಗಮೇಶ್ ಗುಮ್ಮೆ , ನರೇಶ್ ಗೌಳಿ, ವಿಜಯ್ ಕುಮಾರ್ ಹೆಗ್ಗೆ , ಗುಣವಂತ ಬಾವಿಕಟ್ಟಿ ,ನಿಜಲಿಂಗ ಪಾಟೀಲ್, ಬಸವರಾಜ್ ಮುಲ್ಗೆ, ಶಶಿ ಮರ್ಕಲ್, ಪ್ರಕಾಶ್ ಗಾದಗೆ, ಬಂಡೆಪ್ಪ ಪತ್ತೆಪುರ್ ಅನೇಕರು ಉಪಸ್ಥಿತರಿದ್ದರು.

65
1229 views