logo

20ನೇ ವರ್ಷದ ಸ್ನೇಹ ಮಿಲನ 2025 ಸುಗಂಧ ಬಳಗದ ಸಂಭ್ರಮ

ಶಿಕಾರಿಪುರ: 25-12-2025
ಬಳಗದ ಮಕ್ಕಳ ವೇದಿಕೆಯ ಅಭಿಪ್ರಾಯವೇ ಕಾರ್ಯಕ್ರಮಕ್ಕೆ ಪ್ರೇರಣೆ.
ಬಳಗದ ಎಲ್ಲಾ ಸದಸ್ಯರ ಸಹಕಾರವೇ ಸಂಘಟನೆ ಬೆಳೆಯಲು ಸಾಧ್ಯ
ಅಧ್ಯಕ್ಷ ಪ್ರಕಾಶ್ ಎಂಜಿ
ಶಿಕಾರಿಪುರ
ಬಳಗದಲ್ಲಿ ಯಶಸ್ವಿಯ ಹಾದಿಯಲ್ಲಿ ಹೋಗುವ ನಮ್ಮ ಬಳಗದ ಮಕ್ಕಳನ್ನೇ ವೇದಿಕೆಯಲ್ಲಿ ಆಹ್ವಾನಿಸಿ ಅವರಿಗಾದ ಅನುಭವಗಳನ್ನು ಕೇಳುವುದೇ ಈ ಕಾರ್ಯಕ್ರಮದ ಮಹತ್ವ ಬಳಗದ ಎಲ್ಲ ಸದಸ್ಯ ಕುಟುಂಬಗಳ ಸಹಕಾರವೇ ಇಂದು ಈ ಬಳಗ ಬೆಳೆಯಲು ಕಾರಣ ಎಂದು ಬಳಗವನ್ನು 20 ವರ್ಷಗಳ ಕಾಲ ಬೆಳೆಸಿದ ಮೌಲ್ಯಾಧಾರಿತ ವ್ಯಕ್ತಿತ್ವ ಗುಣದ ಕ್ರಿಯಾಶೀಲೆತೆಗೆ ಇನ್ನೊಂದು ಹೆಸರಾದ ಅಧ್ಯಕ್ಷ ಎಂಜಿ ಪ್ರಕಾಶ್ ತಮ್ಮ ಅಭಿಪ್ರಾಯವನ್ನು ಹೊರ ಹಾಕಿದರು. ಶಿಕಾರಿಪುರದ ಚೆನ್ನಕೇಶವ ನಗರದ ವಿಶ್ವಕರ್ಮ ಸಮುದಾಯ ಭವನದಲ್ಲಿ ನಡೆದ
ಮಾನವ ಸಂಪನ್ಮೂಲ ಸಂಸ್ಥೆಯ ಸುಗಂಧ ಬಳಗದ 20ನೇ ವರ್ಷದ ಸ್ನೇಹ ಮಿಲನ. ಪ್ರತಿಭಾ ಪುರಸ್ಕಾರ. ಕ್ಯಾಲೆಂಡರ್ ಬಿಡುಗಡೆ ಮತ್ತು ಧ್ವನಿ ಮುದ್ರಿಕೆ ಬಿಡುಗಡೆಗಳ ವಿನೂತನ ವಿಶೇಷ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು
ಇಂದಿನ ಕಾರ್ಯಕ್ರಮದಲ್ಲಿ ಮಹಿಳೆ ಹಾಗೂ ಪುರುಷ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದು ಕಾರ್ಯಕ್ರಮದ ಯಶಸ್ವಿಕೆ ಕಾರಣರಾದ ರೆಂದು ಪ್ರಕಾಶ್ ತಮ್ಮ ಸಂತೋಷದ ಧ್ವನಿಯಲ್ಲಿ ಮಾತನಾಡಿದರು ಇದು ನಮ್ಮ ಕುಟುಂಬದ ನಮ್ಮ ಮಕ್ಕಳ ಕಾರ್ಯಕ್ರಮವಾಗಿದ್ದು ನಮ್ಮ ಬಳಗದ ಕುಟುಂಬದಲ್ಲಿರುವ ಸದಸ್ಯರ ಹಾಗೂ ಮಕ್ಕಳಲ್ಲಿ ಅಡಗಿರುವ ಕಲೆ ಹಾಗೂ ಕೌಶಲ್ಯಗಳನ್ನು ಹೊರ ತರಲು ಇಂತಹ ವೇದಿಕೆ ಕಾರ್ಯಕ್ರಮಗಳು ಪೂರಕವಾಗಲಿದೆ ಈ ಕುಟುಂಬಗಳಲ್ಲಿ ಯಾರದೇ ಮನೆಯಲ್ಲಿ ಮದುವೆ ಮುಂಜಿ ಗೃಹಪ್ರವೇಶಕ್ಕೆ ಬಳಗದ ಸದಸ್ಯರೆಲ್ಲರೂ ಹಾಜರಾಗಿ ಸಹಕರಿಸಬೇಕು. ಅವರಿಗೆ ಪೂರಕವಾಗಿ ಸಹಕರಿಸುವುದರ ಜೊತೆಗೆ ಭಾಂದವ್ಯವನ್ನ ವೃದ್ಧಿಪಡಿಸಬೇಕೆಂದು ಒಂದು ವೇಳೆ ಯಾರದ್ದಾದರೂ ಬಳಗದ ಸದಸ್ಯರ ಮನೆಗಳಲ್ಲಿ ಸಾವು ನೋವು ಆದಾಗ ಸಂಸ್ಕಾರ ಬರಿತವಾಗಿ ಹೋಗಿ ವಿಧಿ ವಿಧಾನ ಮೂಲಕ ಸಹಕರಿಸುವ ಗುಣಗಳನ್ನು ಬೆಳೆಸಿಕೊಳ್ಳಬೇಕು ಈಗಾಗಲೇ ಅಂತ ಸಂದರ್ಭದಲ್ಲಿ ಬಳಗದಿಂದ ಸಹಾಯ ಹಸ್ತ ನೀಡಿದೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಸಮಸ್ಯೆಗಳು ಎದುರಾದಾಗ ಎಲ್ಲರೂ ಸೇರಿ ಬಗೆಹರಿಸುವಂತಹ ಪ್ರಯತ್ನ ಮಾಡೋಣ ಹಾಗೂ ಐವತ್ತು ಸಾವಿರ ರೂಗಳವರೆಗೆ ಮೂರು ತಿಂಗಳ ಮಟ್ಟಿಗೆ ಸಹಾಯ ಹಸ್ತ ಮಾಡುವ ಮಾತುಗಳನ್ನು ಆಡಿದರು ಬಳಗದ ಮಕ್ಕಳ ವಿದ್ಯಾಭ್ಯಾಸ ಹಾಗೂ ಪಟ್ಟೇತರ ಚಟುವಟಿಕೆಗಳಿಗೆ ಇಂತಹ ಕಾರ್ಯಕ್ರಮಗಳು ಪೂರಕವಾಗಲಿವೆ ಪ್ರವಾಸ ಸಮಯದಲ್ಲಿ ಮನರಂಜಿಸಲಾದ ಕೆಲವು ಚಟುವಟಿಕೆಗಳು ನೆನಪಿಸಿ. ಮುಂದಿನ ಏಪ್ರಿಲ್ ಮೇ ತಿಂಗಳಲ್ಲಿ ಮೂರು ದಿನಗಳ ಪ್ರವಾಸವನ್ನು ಬಳಗದ ವತಿಯಿಂದ ಹಮ್ಮಿಕೊಳ್ಳಲಾಗುವುದು ಅತಿ ಹೆಚ್ಚು ಕುಟುಂಬಗಳು ಈ ಪ್ರವಾಸದಲ್ಲಿ ಭಾಗಿಯಾಗಿ ಖುಷಿಪಡಲು ವಿನಂತಿಸಿದರು. ಮುಂದಿನ ದಿನಗಳಲ್ಲಿ ಇಂತಹ ವೇದಿಕೆಯ ಮೂಲಕ ಉತ್ತಮ ಉತ್ತಮ ಕೆಲಸಗಳನ್ನು ಮಾಡುವುದರ ಜೊತೆಗೆ ರಾಜಕೀಯ ಹೊರತುಪಡಿಸಿ ಸಮಾಜಮುಖವಾಗಿ ಕೆಲಸ ಮಾಡುತ್ತಿರುವ ವ್ಯಕ್ತಿಗಳನ್ನು ಗುರುತಿಸುವ ಜೊತೆಗೆ ಗೌರವಿಸಿ ನಮ್ಮ ಮಕ್ಕಳೊಂದಿಗೆ ಅಭಿಪ್ರಾಯಗಳನ್ನ ಅನುಭವಗಳನ್ನ ಹಂಚಿಕೊಳ್ಳುವ ಕೆಲಸಗಳನ್ನು ಮಾಡೋಣ ಎಂದರು ಮಹಿಳೆಯರ ಜಾಗೃತಿಗಾಗಿ ಪೊಲೀಸ ಇಲಾಖೆಯಿಂದ ವಿಶೇಷ ಮಾಹಿತಿ ನೀಡುವ ಕಾರ್ಯಕ್ರಮವನ್ನು ಸದ್ಯದಲ್ಲೇ ಆಯೋಜಿಸಲಾಗುವುದು ಎಂದು ತಿಳಿಸಿದರು. ಸುಗಂದ ಬಳಗವು 20ವರ್ಷಗಳಿಂದ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಚತೆ , ಗಿಡ ನೆಡಯವುದು, ಬೇಸಿಗೆಲ್ಲಿ ಗಿಡಗಳಿಗೆ ನೀರು ಉಳಿಸಿ ಪರಸರ ರಕ್ಷತೆಯನ್ನು ಸದಸ್ಯರು ಮಾಡುವುದು, ಅಶಕ್ತರಿಗೆ ಸಹಾಯ ಅಸ್ತ ನೀಡುವುದು ಪರಿಸರ ಹಾಗೂ ಸಮಾಜ ಮುಖಿ ಕೇಸವನ್ನು ನಿರಂತರವಾಗಿ ಮಾಡಿಕೊಂಡು ಬಳಗದ ಸದಸ್ಯರ ಕುಟುಂಬ ಸಹೋದರ ಬಾವನೆ ಇಮ್ಮಡಿಯಾಗಿದೆ
ಪರಿಸರ ಕಾಳಜಿಯ ಸ್ನೇಹ ಮಿಲನದ ಈ ಕಾರ್ಯಕ್ರಮದ ವೇದಿಕೆಯಲ್ಲಿ ಬಳಗದ ಗೌರವಾಧ್ಯಕ್ಷ ರವೀಂದ್ರ ಎಂ ಎಚ್ ರವರು ಸಂಘಟನೆಯ ಮಹತ್ವ ಹಾಗೂ ಅದರ ಸಾಧನೆಯ ಪೂರಕ ಗಳ ಆಗುಹೋಗುಗಳ ಮಾಹಿತಿಯನ್ನು. ಸಾವಿರ ಜಾನಪದ ಗೀತೆಗಳ ಸರದಾರ ಚಂದುಳ್ಳಿ ಹೆಣ್ಣಿಗೆ ಒಡವೆ ಯಾಕೆ ಹಾಡಿನ ಹಿನ್ನೆಲೆ ಗಾಯಕ ಕಡದಕಟ್ಟೆ ತಿಮ್ಮಪ್ಪ ಮಾತನಾಡಿ ನನ್ನಂತ ಕಲಾವಿದರಿಗೆ ವೇದಿಕೆಯನ್ನು ಈ ದಿನ ನನ್ನ ಸಿಡಿ ಬಿಡುಗಡೆ ಮಾಡಲು ಅನುಕೂಲ ಮಾಡಿಕೊಟ್ಟ ಸುಗಂಧ ಬಳಗಕ್ಕೆ ಅಭಿನಂದನೆಗಳನ್ನು ತಿಳಿಸಿ ತಾವು ರಚಿಸಿದ ಗೀತೆಗಳ ಬಗ್ಗೆ ಮಾಹಿತಿಯನ್ನು ನೀಡುವುದರ ಜೊತೆಗೆ ತಾವು ಶಿಕ್ಷಕನಾಗಿದ್ದು ಬೇರೆಯವರ ಹಾಡನ್ನು ಹಾಡದೆ ನನ್ನ ಕಂಠ ಮಾಧುರ್ಯದ ಹೊಸ ಭಾವನಾತ್ಮಕ ಕಂಠಸಿರಿಯಲ್ಲಿ ಹತ್ತಾರು ಒಗಟುಗಳ ಸೇರಿಸಿ ಜಾನಪದ ಸೊಗಡಿನ ಗೀತೆಯನ್ನು ರಚಿಸಿ ಹಾಡುವುದು ನಾನು ಹವ್ಯಾಸವಾಗಿ ಮಾಡುತ್ತಿರುವುದಾಗಿ ತಾವೆಲ್ಲರೂ ನನಗೆ ಕಾಣಿಕೆ ರೂಪದಲ್ಲಿ ನನ್ನ ಯೂಟ್ಯೂಬ್ ಜಾನಪದ ಚಾನಲನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ ಎಂದು ಬಳಗದ ಸದಸ್ಯರಲ್ಲಿ ವಿನಂತಿಸಿದರು ಅತಿಥಿಯಾಗಿ ಭಾಗವಹಿಸಿದ ಉಂಡಿ ಚಂದ್ರಪ್ಪನವರು ಬಳಗದ ಜೊತೆ ತಮಗಾದ ನಲಿವಿನ ಸಡಗರ ಸಂಭ್ರಮದ ಮಾಹಿತಿಯನ್ನು ಕಾರ್ಯಕ್ರಮದ ವೇದಿಕೆಯಲ್ಲಿ ಹಂಚಿಕೊಂಡರು ಸನ್ಮಾನಕ್ಕೆ ಭಜನರಾದ ಮಾಧ್ಯಮ ಮಿತ್ರ ಜಿಕೆ ಹೆಬ್ಬಾರ್ ಅವರು ಮಾತನಾಡಿ ಇದೊಂದು ಸ್ನೇಹ ಮಿಲನ ಕಾರ್ಯಕ್ರಮ ಅನ್ನುವುದಕ್ಕಿಂತ ಹೆಚ್ಚಾಗಿ 70 ಕುಟುಂಬಗಳ ಮಿಲನ ವಾಗಿದೆ. ಈಗ 20ರ ಸಂಭ್ರಮದ ಆಚರಣೆಯಲ್ಲಿರುವ ಸುಗಂಧ ಬಳಗವು ಸುಗಂಧವಾದ ಶ್ರೀಗಂಧದ ಪರಿಮಳದ ಸುಹಾಸನೆ ಬೀರುವ ಸಸಿಯನ್ನು ಅಧ್ಯಕ್ಷ ಪ್ರಕಾಶ್ ಸಾರಥ್ಯದಲ್ಲಿ ಬಳಗದ ಸದಸ್ಯರ ಸಹಕಾರದಿಂದ ಒಂದು ನಟ ಸಸಿ ಇಂದು ದೊಡ್ಡ ಹೆಮ್ಮರವಾಗಿ ಇಂಥ ದೊಡ್ಡ ದೊಡ್ಡ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ ಸಮಾಜಮುಖಿ ಕಾರ್ಯಕ್ರಮಗಳ ಜೊತೆಗೆ ಸ್ನೇಹ ಮಿಲನ ಕುಟುಂಬ ಮಿಲನಗಳು ಮೌಲ್ಯಾಧಾರಿತ ಸಂಸ್ಕಾರಗಳನ್ನ ಇನ್ನು ಹೆಚ್ಚು ಹೆಚ್ಚು ನೀಡುವಂತ ಕಾರ್ಯಕ್ರಮಗಳನ್ನು ಆಯೋಜಿಸುವುದರ ಜೊತೆಗೆ ಎಲೆ ಮರೆಯ ಕಾಯಿಯಾಗಿ ಸಮಾಜ ಸೇವೆಯಲ್ಲಿರುವ ರನ್ನ ಈ ಬಳಗವು ಗುರುತಿಸುತ್ತಾ ಬಂದಿರುತ್ತದೆ ಹಾಗಾಗಿ ಬಳಗಕ್ಕೆ ವಿಶೇಷ ಅಭಿನಂದನೆಗಳನ್ನು ತಿಳಿಸುತ್ತೇನೆ ಎಂದರು ಬಳಗದ ಮಹಿಳಾ ಸದಸ್ಯರ ಮುಖದಲ್ಲಿ ಮಂಡಹಾಸದ ಪ್ರತಿಬಿಂಬ ಶ್ರೀ ಸುಗಂಧ ಬಳಗದ ಅಭಿವೃದ್ಧಿಗೆ ಪೂರಕ ಸಂದೇಶವೆಂದು ಅಭಿಪ್ರಾಯಸಿದರು
ಬಳಗ ಸದಸ್ಯರ ಮನೆಯ ಮಕ್ಕಳಾದ ತಮ್ಮ ವೃತ್ತಿ ಬದುಕಿಗೆ ಬಂದು ಅನಿಸಿಕೆಗಳನ್ನ ವೇದಿಕೆಯ ಮೂಲಕ ಹಂಚಿಕೊಂಡ ಡಾಕ್ಟರ್ ಕಾವ್ಯ ಜೆ ಕರಿಯಪ್ಪ ಹಾಗೂ ಡಾಕ್ಟರ್ ಪ್ರಾರ್ಥನಾ ಮಹೇಶ್ವರ್ ಸ್ವಾಮಿ ಬೇರೆ ವೃತ್ತಿಪದವಿಯ ವಿದ್ಯಾರ್ಥಿಗಳಿಗೆ ಮಾದರಿಯಾದರು ಈ ಕಾರ್ಯಕ್ರಮದ ವೇದಿಕೆಯಲ್ಲಿ ವಾಲ್ಮೀಕಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಅನ್ನಪೂರ್ಣ ಶೇಖರಪ್ಪ ಪುರಸಭಾ ಸದಸ್ಯರಾದ ಪಾಲಾಕ್ಷಪ್ಪ ಹೆಚ್ ವಕೀಲರ ಸಂಘದ ಅಧ್ಯಕ್ಷ ಉಮೇಶ್ ಎಂ ಜಿ ಸುರೇಶ್ ಎಂಬಿ ಹಾಗೂ ಇತರ ಸರಸ್ವತಿ ಪುತ್ರರು ಉಪಸ್ಥಿತರಿದ್ದು ವೇದಿಕೆಯ ಗಣ್ಯರಿಂದ ಕಾರ್ಯಕ್ರಮದ ಉದ್ಘಾಟನೆಯ ಜೊತೆಗೆ ನೂತನ ಸಂವತ್ಸರದ ಕ್ಯಾಲೆಂಡರ್ ಬಿಡುಗಡೆ ಮಾಡಿ ಬಳಗದ ಮಕ್ಕಳಿಗೆ ಪ್ರತಿಪಾ ಪುರಸ್ಕಾರ ನೀಡಲಾಯಿತು ಹಾಗೂ ಎಲೆಮರೆಕಾಯಿಯಾಗಿ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡು ಸಾಧನೆಗೆ ಪ್ರಶಸ್ತಿ ಪುರಸ್ಕೃತರನ್ನು ಪೂರಕವಾದ ಪರಮೇಶಪ್ಪ ವೃತ್ತಿ, ಬೆನಕಪ್ಪ ಯೋಗ, ಜಿ.ಎಂ. ದಿನೇಶ್ ಆಚಾರ್ಯ ತರಬೇತಿ, ಸುರೇಶ್ ಎನ್ .ವಿ. ವೃತ್ತಿ, ದೇವರಾಜ್ ವೈ ಕ್ರೀಡೆ, ಎಂ. ಜೆಕೆ ಹೆಬ್ಬಾರ್ ಮಾದ್ಯಮ, ವಿಜಯ ಭಾಸ್ಕರ್ ಸಹಕಾರ, ವಿಭಾಗ ಅನೇಕರನ್ನ ಸುಗಂಧ ಬಳಗದ ಈ ವಿನೋತನ ವೇದಿಕೆಯ ಕಾರ್ಯಕ್ರಮದಲ್ಲಿ ನೆನಪಿನ ಕಾಣಿಕೆಯೊಂದಿಗೆ ಗೌರವದ ಸನ್ಮಾನವನ್ನು ಮಾಡಲಾಯಿತು ಬಳಗದ ಕಲಾ ಸದಸ್ಯರಿಂದ ವಿನೂತನ ರಸಮಂಜರಿ ಕಾರ್ಯಕ್ರಮದೊಂದಿಗೆ ಭೋಜನ ಮಾಡುತ್ತಾ ನವರಸ ಗೀತನೆಗಳನ್ನು ಆಲಿಸಿ ಸಂಭ್ರಮಿಸಲಾಯಿತು

0
77 views