logo

ಅನಿಶ್ಚಿತ ರಾಜಕೀಯದಿಂದಾಗಿ ಕುಂಟುತ್ತಾ ಸಾಗಿದ್ದ ದೇಶದ ಆರ್ಥಿಕತೆಗೆ ಹೊಸ ಆರ್ಥಿಕ ನೀತಿಯ ಮೂಲಕ ಚೈತನ್ಯವನ್ನು ತುಂಬಿ ಭಾರತವನ್ನು ಅಭಿವೃದ್ದಿಯ ಪಥದಲ್ಲಿ ಮುನ್ನಡೆಸಿದ್ದವರು ಮಾಜಿ ಪ್ರ

ಅನಿಶ್ಚಿತ ರಾಜಕೀಯದಿಂದಾಗಿ ಕುಂಟುತ್ತಾ ಸಾಗಿದ್ದ ದೇಶದ ಆರ್ಥಿಕತೆಗೆ ಹೊಸ ಆರ್ಥಿಕ ನೀತಿಯ ಮೂಲಕ ಚೈತನ್ಯವನ್ನು ತುಂಬಿ ಭಾರತವನ್ನು ಅಭಿವೃದ್ದಿಯ ಪಥದಲ್ಲಿ ಮುನ್ನಡೆಸಿದ್ದವರು ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ .

ಯುಪಿಎ ಅಧಿಕಾರಾವಧಿಯಲ್ಲಿ ಪ್ರಧಾನಿಯಾಗಿ ಡಾ.ಸಿಂಗ್ ಅನುಷ್ಠಾನಕ್ಕೆ ತಂದಿರುವ ಉದ್ಯೋಗ ಖಾತ್ರಿಯ ಮನರೇಗಾ ಯೋಜನೆ, ಶಿಕ್ಷಣ ಮತ್ತು ಮಾಹಿತಿ ಹಕ್ಕಿನ ಕಾನೂನುಗಳು, ರೈತರ ಬ್ಯಾಂಕ್ ಸಾಲ ಮನ್ನಾ ಮತ್ತು ಇ-ಆಡಳಿತವನ್ನು ಸುಗಮಗೊಳಿಸುವ ಆಧಾರ್ ಗುರುತಿನ ಚೀಟಿಯ ಜಾರಿಗಾಗಿ ಅವರು ಕೈಗೊಂಡಿದ್ದ ದಿಟ್ಟ ನಿರ್ಧಾರಗಳು ಅವರ ಜನಪರ ಕಾಳಜಿ ಮತ್ತು ದೂರದೃಷ್ಟಿಗೆ ಸಾಕ್ಷಿಯಾಗಿವೆ.

ವಿಶ್ವವಿಖ್ಯಾತ ಆರ್ಥಿಕ ತಜ್ಞ, ಮುತ್ಸದ್ದಿ ನಾಯಕ, ಆದರ್ಶ ರಾಜಕಾರಣಿ ಗೌರವಾನ್ವಿತ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರನ್ನು ಅವರ ಪುಣ್ಯಸ್ಮರಣೆಯ ಸಂದರ್ಭದಲ್ಲಿ ಹೆಮ್ಮೆಯಿಂದ ನೆನೆದು, ನಮಿಸುತ್ತೇನೆ.

#ManmohanSingh

16
248 views
  
1 shares