logo

ಚಬನೂರಲ್ಲಿ ಶ್ರೀರಾಮಲಿಂಗೇಶ್ವರ ಮಠ ಉದ್ಘಾಟನಾ ಪೂರ್ವಭಾವಿ ಸಭೆ


ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕಿನ ಚಬನೂರ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀರಾಮಲಿಂಗೇಶ್ವರ ಮಠ ಹಾಗೂ ಕಲ್ಯಾಣ ಮಂಟಪದ ಲೋಕಾರ್ಪಣೆ ಸಮಾರಂಭದ ಅಂಗವಾಗಿ ಪೂರ್ವಭಾವಿ ಸಭೆ ಭಕ್ತಿಭಾವದಿಂದ ಜರುಗಿತು.
ಪೂರ್ವಭಾವಿ ಸಭೆಯ ದಿವ್ಯ ಸಾನಿಧ್ಯವನ್ನು ಮಾಗಣಗೇರಿ ಬ್ರಹನ್ಮಠದ ಷಟಸ್ಥಲ ಬ್ರಹ್ಮ ಡಾ. ವಿಶ್ವರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿದ್ದರು.
ಸಭೆಯಲ್ಲಿ ನಾಡಿನ ಖ್ಯಾತ ನೇತ್ರ ತಜ್ಞ ಹಾಗೂ ಸಮಾಜಸೇವಕರಾದ ಡಾಕ್ಟರ್ ಪ್ರಭುಗೌಡ ಲಿಂಗದಳ್ಳಿ ಮಾತನಾಡಿ, ಫೆಬ್ರವರಿ 8ರಂದು ರಾಮಲಿಂಗಯ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ನಡೆಯಲಿರುವ ಸಿದ್ಧಿಪುರುಷ ಶ್ರೀರಾಮಲಿಂಗೇಶ್ವರ ನೂತನ ಮಠ ಹಾಗೂ ಕಲ್ಯಾಣ ಮಂಟಪದ ಲೋಕಾರ್ಪಣೆ ಕಾರ್ಯಕ್ರಮವು ನನ್ನ ಹುಟ್ಟೂರಿನ ಮಹತ್ವದ ಕಾರ್ಯಕ್ರಮವಾಗಿದ್ದು, ಈ ಕಾರ್ಯಕ್ರದ ಯಶಸ್ಸಿಗೆ ನಾನು ಮತ್ತು ನನ್ನ ಇಡೀ ಕುಟುಂಬ ತನು–ಮನ–ಧನದೊಂದಿಗೆ ಶಕ್ತಿ ಮೀರಿ ಶ್ರಮಿಸುತ್ತೇವೆ. ಎಲ್ಲ ಪರಮಪೂಜ್ಯರು ಹಾಗೂ ಸದ್ಭಕ್ತರ ಸಹಕಾರ ಅಗತ್ಯವಿದೆ ಎಂದು ತಿಳಿಸಿದರು.
ಸಭೆಯ ವೇದಿಕೆಯಲ್ಲಿ ಉಪಸ್ಥಿತರಿದ್ದ ಬಸನಗೌಡ ಪಾಟೀಲ ಎಡಿಯಾಪೂರ ಹಾಗೂ ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ ಅವರು ತಮ್ಮ ಧನ ಸಹಾಯವನ್ನು ಘೋಷಿಸಿ, ಕಾರ್ಯಕ್ರಮದ ಯಶಸ್ಸಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದ ಬಾಗೇವಾಡಿಯ ಪೂಜ್ಯಶ್ರೀ ಶಿವಪ್ರಕಾಶ ಮಹಾಸ್ವಾಮಿಗಳು, ಕೋಲಾರದ ಪ್ರಭುಕುಮಾರ ಶ್ರೀಗಳು, ಕಡಕೋಳ ಶ್ರೀಗಳು, ದೇವರಹಿಪ್ಪರಗಿಯ ಜಡಿಮಠದ ಶ್ರೀಗಳು, ಕೊಡೆಕಲ್ಲದ ಶಿವಕುಮಾರ ಶ್ರೀಗಳು, ಮನಗೂಳಿಯ ಸಂಗನಬಸವ ಶ್ರೀಗಳು ಅವರು ರಾಮಲಿಂಗಯ್ಯ ಮಹಾಸ್ವಾಮಿಗಳ ಈ ಧಾರ್ಮಿಕ ಕಾರ್ಯದಿಂದ ಈ ಭಾಗದ ಭಕ್ತರಿಗೆ ಅಪಾರ ಅನುಕೂಲವಾಗಲಿದ್ದು, ಎಲ್ಲರೂ ಸಹಕರಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.
ಪೂರ್ವಭಾವಿ ಸಭೆಯ ದಿವ್ಯ ಸಾನಿಧ್ಯವಹಿಸಿ ಮಾಗಣಗೇರಿ ಪರಮಪೂಜ್ಯರು ಆಶೀರ್ವಚನ ನೀಡಿದರು.
ಸಭೆಯಲ್ಲಿ ನವದಗಿ ಬ್ರಹನ್ಮಠದ ಷಟಸ್ಥಲ ಬ್ರಹ್ಮ ರಾಜಗುರು ರಾಜೇಂದ್ರ ಒಡೆಯರ್ ಶಿವಾಚಾರ್ಯರು, ಕಲಕೇರಿಯ ಸಿದ್ದರಾಮ ಶಿವಾಚಾರ್ಯರು, ದೇವರಹಿಪ್ಪರಗಿಯ ಶಿವಯೋಗಿ ಶಿವಾಚಾರ್ಯರು, ವಡವಡಗಿ ಶ್ರೀಗಳು, ಪಡೇಕನೂರ ಶ್ರೀಗಳು, ಗ್ರಾಮಸ್ಥ ಗಣ್ಯರಾದ ಬಸನಗೌಡ ಪಾಟೀಲ, ಹಾಗೂ ಸರ್ವ ಸಮಾಜದ ಹಿರಿಯರು, ಮುಖಂಡರು ಮತ್ತು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ವರದಿ : SCN TV News, ತಾಳಿಕೋಟಿ

9
666 views