ಹೊನ್ನಾಳಿಯಲ್ಲಿ ಮಹಿಳಾ ಅಭ್ಯರ್ಥಿಗಳಿಗಾಗಿ ಉದ್ಯೋಗ ಮೇಳ.
ಹೊನ್ನಾಳಿ:ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೊನ್ನಾಳಿ ಇಲ್ಲಿ ಐಕ್ಯುಎಸಿ ಹಾಗೂ ಉದ್ಯೋಗ ಭರವಸಾ ಕೋಶದಡಿ ಯೂನಿಕ್ ಸ್ಕಿಲ್ ಸೋರ್ಸ್ ಸಂಸ್ಥೆಯ ಸಹಯೋಗದಲ್ಲಿ ಮಹಿಳಾ ಅಭ್ಯರ್ಥಿಗಳಿಗಾಗಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ದಿನಾಂಕ 17-12-2025 (ಬುಧವಾರ) ರಂದು ಈ ಉದ್ಯೋಗ ಮೇಳವು ನಡೆಯಲಿದ್ದು, ಪ್ರಸಿದ್ಧ TATA Electronics Company ಯಲ್ಲಿ ನೇರ ಉದ್ಯೋಗಾವಕಾಶವನ್ನು ಈ ಮೂಲಕ ಒದಗಿಸಲಾಗುತ್ತದೆ.
ಈ ಉದ್ಯೋಗ ಮೇಳವು ಮಹಿಳೆಯರಿಗೆ ಒಂದು ಉತ್ತಮ ಸದಾವಕಾಶವಾಗಿದ್ದು, PUC / ITI / ಡಿಪ್ಲೊಮಾ / ಡಿಗ್ರಿ ಇವುಗಳಲ್ಲಿ ಯಾವುದಾದರೂ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ. ಯಾವುದೇ ಕಾಲೇಜಿನ ವಿದ್ಯಾರ್ಥಿನಿಯರು ಹಾಗೂ ಹೊರಗಿನ ಮಹಿಳಾ ಅಭ್ಯರ್ಥಿಗಳಿಗೂ ಸಹ ಈ ಉದ್ಯೋಗ ಮೇಳದಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ.
TATA Electronics Company ಪರವಾಗಿ ಯೂನಿಕ್ ಸ್ಕಿಲ್ ಸೋರ್ಸ್ ಸಂಸ್ಥೆಯ ಪ್ರತಿನಿಧಿಗಳು ನೇರವಾಗಿ ಹೊನ್ನಾಳಿಗೆ ಆಗಮಿಸಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಸಲಿದ್ದಾರೆ. ಇದರಿಂದ ಆಯ್ಕೆಯಾದ ಮಹಿಳಾ ಅಭ್ಯರ್ಥಿಗಳಿಗೆ TATA Electronics Company ಯಲ್ಲಿ ನೇರ ಉದ್ಯೋಗ ಲಭ್ಯವಾಗಲಿದೆ.
ಈ ಉದ್ಯೋಗ ಮೇಳದ ಸದುಪಯೋಗವನ್ನು ದಾವಣಗೆರೆ ಜಿಲ್ಲೆ ಹಾಗೂ ನೆರೆಹೊರೆಯ ಜಿಲ್ಲೆಗಳ ಮಹಿಳಾ ಅಭ್ಯರ್ಥಿಗಳು ಪಡೆದುಕೊಳ್ಳಬೇಕು ಎಂದು ಆಯೋಜಕರು ಮನವಿ ಮಾಡಿದ್ದಾರೆ.