ಡಾ. ಶಿವಕುಮಾರ್ ಸಿಆರ್ ರಾಜೀವ್ ಗಾಂಧಿ ಸಿಂಡಿಕೇಟ್ ಮೆಂಬರ್ ಆಗಿ ನೇಮಕ
ಕಲಬುರ್ಗಿಯ ಸುಪ್ರಸಿದ್ಧ ವೈದ್ಯ ಹಾಗೂ ಜಿಮ್ಸ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ಶಿವಕುಮಾರ್ ಸಿ ಆರ್ ಅವರನ್ನು ರಾಜ್ಯದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರನ್ನಾಗಿ ಒಂದು ವರ್ಷದ ಅವಧಿಗೆ ನೇಮಕ ಮಾಡಲಾಗಿದೆ. ವೈದ್ಯಕೀಯ ರಂಗದಲ್ಲಿ ಅಪಾರ ಸೇವೆ ಸಲ್ಲಿಸಿದ ಇವರು ಬೀದರ್, ಬ್ರಿಮ್ಸ್ ನಲ್ಲಿ ಪ್ರಭಾರ ನಿರ್ದೇಶಕರಾಗಿಯೂ ಉತ್ತಮ ಗುಣಮಟ್ಟದ ಸೇವೆ ಸಲ್ಲಿಸಿದ್ದಾರೆ. ಪತ್ರಕರ್ತ ಸುರೇಶ್ ಕೊಟಗಿ ರಮೇಶ್ ಕೊಟಗಿ ಶುಭಕೋರಿದ್ದಾರೆ.