ಬೀದರ್ ಗ್ರಾಮಾಡಳಿತಕಾರಿಗಳಿಗೆ ಮೂಲ ಕೇಂದ್ರ ಸ್ಥಾನ ನೀಡಲು ಆಗ್ರಹ
ಬೀದರ ಜಿಲ್ಲೆಯ ಕೆಲವು ಪ್ರಭಾರಿ ಗ್ರಾಮ ಆಡಳಿತಕಾರಿಗಳಿಗೆ ಬೀದರ್ ಜಿಲ್ಲೆಯ ತಹಶೀಲ್ದಾರರು ಲಂಚ ಪಡೆದು ಮೂಲ ಕೇಂದ್ರಸ್ಥಾನಗಳನ್ನು ನೀಡಿ ಉಳಿದ ಗ್ರಾಮ ಆಡಳಿತಕಾರಿಗಳಿಗೆ ಅನ್ಯಾಯ ಮಾಡಿದ್ದಾರೆಂದು ಜಿಲ್ಲಾ ಗ್ರಾಮ ಆಡಳಿತ ಕಾರಿಗಳ ಅಧ್ಯಕ್ಷ ಬಬ್ರುವಾಹನ ಬೆಳಂಗಿ ಆ ರೋಪಿಸಿದ್ದಾರೆ. ಜಿಲ್ಲಾಧಿಕಾರಿಗಳು ಕೂಡಲೇ ಕ್ರಮ ಕೈಗೊಂಡು ಜನರ ಸಮಸ್ಯೆಗಳ ಪರಿಹಾರಕ್ಕಾಗಿ ಆಡಳಿತ ಅಧಿಕಾರಿಗಳಿಗೆ ಮೂಲ ಕೇಂದ್ರ ಸ್ಥಾನ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ.