logo

ಕಾಂಗ್ರೆಸ್ ಪಕ್ಷ ರೈತರ ಪರ - ಡಾಕ್ಟರ್ ಮುದ್ದು ಗಂಗಾಧರ್. ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ನಿಗಮದ ಅಧ್ಯಕ್ಷರು

ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿಯಮಿತ ಅಧ್ಯಕ್ಷರಾದ ಶ್ರೀ ಡಾ. ಬಿ ಸಿ ಮುದ್ದು ಗಂಗಾಧರ್ ರವರು ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿಗೆ ಭೇಟಿ ನೀಡಿದರು ಮೊದಲಿಗೆ ನಗರದಲ್ಲಿರುವಂತಹ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ನಂತರ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ ಕಾಂಗ್ರೆಸ್ ಪಕ್ಷವು ನನ್ನನ್ನು ರಾಜ್ಯ ಕಾರ್ಯದರ್ಶಿಯಾಗಿ ನೇಮಿಸಿದ್ದು ಪ್ರಸ್ತುತ ಮುಂಬರುವ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯ ಜವಾಬ್ದಾರಿಯನ್ನು ನನೆಗೆ ನೀಡಿದ್ದಾರೆ ಶ್ರೀನಿವಾಸಪುರ ತಾಲೂಕಿನ ಉಸ್ತುವಾರಿಯಾಗಿ ನಾನು ಕಾರ್ಯನಿರ್ವಹಿಸುತ್ತಿದ್ದೇನೆ ಈಗಾಗಲೇ ಪದವಿ ದರ ಕ್ಷೇತ್ರದ ಪಟ್ಟಿಯಲ್ಲಿ ಮತದಾರರ ನೋಂದಣಿ ಕಾರ್ಯ ಪ್ರಾರಂಭಿಸಿದ್ದು ಪಕ್ಷ ಸೂಚಿಸುವ ಅಭ್ಯರ್ಥಿಯನ್ನು ಗೆಲ್ಲಿಸುವುದು ನನ್ನ ಕರ್ತವ್ಯವಾಗಿದೆ. ಜೊತೆಗೆ ನಾನು ಪ್ರಸ್ತುತ ಮಾವು ಅಭಿವೃದ್ಧಿ ನಿಗಮದ ಅಧ್ಯಕ್ಷನಾಗಿದ್ದು ಶ್ರೀನಿವಾಸ್ ಪುರ ಕ್ಷೇತ್ರ ಇಡೀ ವಿಶ್ವದಲ್ಲೇ ಮಾವು ಬೆಳೆಗೆ ಮತ್ತು ಮಾರುಕಟ್ಟೆಗೆ ಹೆಸರುವಾಸಿಯಾದ ಸ್ಥಳವಾಗಿದೆ. ರಾಜ್ಯದಲ್ಲಿ ಮಾವು ಬೆಳೆಗಾರರು ಹಲವಾರು ಸಮಸ್ಯೆಗಳನ್ನ ಎದುರಿಸುತ್ತಿದ್ದು ಅವರ ಸಮಸ್ಯೆಗಳಿಗೆ ಸ್ಪಂದಿಸುವುದು ನನ್ನ ಜವಾಬ್ದಾರಿಯಾಗಿದೆ. ನಮ್ಮ ಅಭಿವೃದ್ಧಿ ನಿಗಮದಿಂದ ಚಿಕ್ಕಬಳ್ಳಾಪುರ ಮತ್ತು ಕೋಲಾರ ಹಾಗೂ ರಾಮನಗರ ಜಿಲ್ಲೆಗೆ ಪ್ರಸ್ತುತ 40 ಕೋಟಿ 49 ಲಕ್ಷ ರೂ ಗಳನ್ನ ಕರ್ನಾಟಕ ಸರ್ಕಾರವು ಮಾವು ಬೆಳೆಗಾರರಿಗೆ ಪ್ರೋತ್ಸಾಹ ಧನವನ್ನು ವನ್ನು ವಿತರಿಸಲಾಗಿದೆ. ಈಗಾಗಲೇ ರೈತರ ಬ್ಯಾಂಕ್ ಖಾತೆಗಳಿಗೆ ಹಣ ಪಾವತಿ ಮಾಡಿದ್ದೇವೆ ಮುಂದಿನ ಮೂರು ತಿಂಗಳಲ್ಲಿ ಮಾವು ಬೆಳೆಗಾರರ ಮಾರುಕಟ್ಟೆ ವೈವಾಟುಗಳು ಪ್ರಾರಂಭವಾಗಲಿದ್ದು ರೈತರ ಪರವಾಗಿ ಮತ್ತು ಅವರ ಬೆಂಬಲವಾಗಿ ಕಾರ್ಯ ನಿರ್ವಹಿಸುವುದು ನನ್ನ ಜವಾಬ್ದಾರಿಯಾಗಿದೆ ಎಂದು ನಿಗಮ ಮಂಡಳಿ ಅಧ್ಯಕ್ಷರಾದ ಶ್ರೀ ಮುದ್ದು ಗಂಗಾಧರ್ ರವರು ತಿಳಿಸಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಕ್ಬರ್ ಶರೀಫ್, ಸಂಜಯ್ ಕುಮಾರ್, ಕೆಕೆ ಮಂಜುನಾಥ್ ಮತ್ತು ಕೆಪಿಸಿಸಿ ಸದಸ್ಯರು ಹಾಗೂ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು

0
295 views