ಪತ್ರಕರ್ತರ ಮೇಲೆ ಹಲ್ಲೆ ಬಂಧನಕ್ಕೆ ಆಗ್ರಹ
ಕಲಬುರಗಿ ಜಿಲ್ಲೆ ಯಡ್ರಾಮಿ ತಾಲೂಕಿನ ಪತ್ರಕರ್ತ ಪ್ರಶಾಂತ್ ಚೌಹಾಣ್ ಮೇಲೆ ಗಂಭೀರವಾಗಿ ಹಲ್ಲೆ ಮಾಡಿದ ಆರೋಪಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕಾರ್ಯನಿರತ ಪತ್ರಕರ್ತರ ಸಂಘ, ಜಿಲ್ಲಾ ಎಸ್. ಪಿ ಅಡೂರು ಶ್ರೀನಿವಾಸಲು ಅವರಿಗೆ ಮನವಿ ಸಲ್ಲಿಸಿತು. ಪತ್ರಿಕಾರಂಗ ಸಂವಿಧಾನದ ನಾಲ್ಕನೇ ಸ್ತಂಭವಿರುವುದರಿಂದ ಪತ್ರಕರ್ತರಿಗೆ ಕೆಲಸ ನಿರ್ವಹಿಸಲು ಮುಕ್ತ ವಾತಾವರಣ ಕಲ್ಪಿಸಲು ಈ ಸಂದರ್ಭದಲ್ಲಿ ಜಿಲ್ಲಾಡಳಿತಕ್ಕೆ ಒತ್ತಾಯಿಸಿತು.