ಸಿ ಇ ಐ ಆರ್ ಪೋರ್ಟಲ್ ಸಹಾಯದಿಂದ ಮೊಬೈಲ್ ಪತ್ತೆ
ಸಾರ್ವಜನಿಕರು ಕಳೆದುಕೊಂಡಿರುವ ಮೊಬೈಲ್ ಗಳನ್ನು ಸಿ ಇ ಐ ಆರ್ ಪೋರ್ಟಲ್ ಸಹಾಯದಿಂದ ಪತ್ತೆ ಹಚ್ಚಿದ ಬೀದರ್ ಜಿಲ್ಲೆ, ಚಿಟ್ಗುಪ್ಪ ಪೊಲೀಸ್ ಠಾಣೆ ಪಿಎಸ್ಐ ಬಸಲಿಂಗಪ್ಪ ಮತ್ತು ಎಎಸ್ಐ ಸಂಜು ಕುಮಾರ್ ರವರು ಮೊಬೈಲ್ ಫೋನನ್ನು ವಾರಸುದಾರರಿಗೆ ಹಸ್ತಾಂತರಿಸಿದ್ದಾರೆಂದು ಪೊಲೀಸ್ ಮೂಲಗಳಿಂದ ವರದಿಯಾಗಿದೆ. ಪೊಲೀಸರ ಈ ಕಾರ್ಯಕ್ಕೆ ಬೀದರ ಎಸ್ ಪಿ ಪ್ರದೀಪ್ ಗುಂಟಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.