logo

ದಿಡ್ಡಿ ಮೊಹಲ್ಲಾ ಕಾ ರಾಜಾ : ಗಣೇಶೋತ್ಸವ ಸಂಭ್ರಮದ ಆಚರಣೆ.

ಚಿತ್ತಾಪುರ : ಪಟ್ಟಣದ ವಾರ್ಡ್ ಸಂಖ್ಯೆ 16 ದಿಡ್ಡಿ ಮೊಹಲ್ಲಾ ಶ್ರೀ ಬಾಲ ಗಜಾನನ ತರುಣ ಸಂಘದ ಅಧ್ಯಕ್ಷ ಗೌರಿಶಂಕರ್ ರುದ್ರ ಬೆಣ್ಣಿ ನೇತೃತ್ವದಲ್ಲಿ ಕಾರ್ಯಕರ್ತರು ಸೇರಿ ಗೌರಿ ಗಣೇಶ ಹಬ್ಬದ ಪ್ರಯುಕ್ತ ದಿಡ್ಡಿ ಮೊಹಲ್ಲಾ ಕಾ ರಾಜಾ ಎಂಬ ಹೆಸರಿನ ಗಣೇಶ್ ಮೂರ್ತಿ ಪ್ರತಿಷ್ಠಾಪಿಸಿ ಪ್ರತಿದಿನ ಸಾಂಸ್ಕೃತಿಕ ಧಾರ್ಮಿಕ ಕಾರ್ಯಕ್ರಮಗಳನ್ನು ಆಚರಿಸುವುದಲ್ಲದೆ ಕಾರ್ಯಕ್ರಮದಲ್ಲಿ ಧಾರ್ಮಿಕ ವಿಧಿವಿಧಾನಗಳು ಮತ್ತು ಗಣ್ಯರ ಸಮ್ಮುಖದಲ್ಲಿ ಸನ್ಮಾನ ಸಮಾರಂಭ ನಡೆಯಲಾಯಿತು. ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ ಏಕವ್ಯಕ್ತಿ ನೃತ್ಯ, ಗುಂಪು ನೃತ್ಯ, ಹಾಡು, ಮಿಮಿಕ್ರಿ ಇತ್ಯಾದಿಗಳನ್ನು ಏರ್ಪಡಿಸಲಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಬಾಲಕರು, ಬಾಲಕಿಯರು ಸ್ಪರ್ಧೆಗಳಲ್ಲಿ ಭಾಗ ವಹಿಸಿ ಶುಕ್ರವಾರದಂದು ಸಾಯಂಕಾಲ 7- 11ಗಂಟೆ ಯವರೆಗೆ ಕಾರ್ಯಕ್ರಮ ಯಶಸ್ವಿಗೊಳಿಸಿದರು.

ಗಣೇಶ ಚತುರ್ಥಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಹಾಗೂ ಶನಿವಾರ ಮಧ್ಯಾನ ಅನ್ನ ಪ್ರಸಾದವನ್ನು ಸಹ ಆಯೋಜಿಸಲಾಗಿತ್ತು.

ಐದು ದಿನಗಳ ನಂತರ ರವಿವಾರದಂದು ವಿಸರ್ಜಿಸಲಾಗುವುದು ಎಂದು ಉಪಾಧ್ಯಕ್ಷ ವಿಜಯಕುಮಾರ್ ಮಡಿವಾಳ ತಿಳಿಸಿದರು.

ಗಣೇಶ ಮಂಡಳಿಯ ಗೌರವ ಅಧ್ಯಕ್ಷರು ರಾಜು ಬೆಣ್ಣಿ, ಅಧ್ಯಕ್ಷರು ಗೌರಿಶಂಕರ್ ಬೆಣ್ಣಿ, ಉಪಾಧ್ಯಕ್ಷರು ವಿಜಯಕುಮಾರ್ ಮಡಿವಾಳ,ಕಾರ್ಯದರ್ಶಿ ನರಸೋಬಾ ಬುರಬುರೆ, ಖಂಜಾಚಿ ಅನೀಲಕುಮಾರ ಹಬೀಬ್,

ಸದಸ್ಯರು ಗಿರೀಶ್ ಸುಗಂಧಿ, ಆಕಾಶ್ ಸುಗಂಧಿ, ಶ್ರೀನಿವಾಸ ಪೇಂದು, ಪ್ರಶಾಂತ ಪೇಂದು, ರಾಜಶೇಖರ ರಾಜೋಳಿ, ಸಿದ್ದು ಹಡಪದ, ಸೋಮನಾಥ ಹಡಪದ, ಮುನಿಯಪ್ಪ ಕಡಬೂರ, ಶೇಖರ್ ಕಡಬೂರ, ಅಶೋಕ್ ಮಡಿವಾಳ, ಬಸವರಾಜ ಸೂಲಹಳ್ಳಿ, ರಾಚಣ್ಣ ಸೂಲಹಳ್ಳಿ, ಲಿಂಗರಾಜ ನಾಚವಾರ, ರಾಜು ಚಪಾಟ್ಲೆ, ನಾಗೇಶ್ ಬುರಬುರೆ, ಚೇತನ್ ನಾಯಕ್, ವಿಶ್ವನಾಥ್ ಹಡಪದ, ಚಂದು ಹಡಪದ, ನಾಗರಾಜ ಹಡಪದ, ಮುರಳಿ ಹಡಪದ, ಮಲ್ಲಿಕಾರ್ಜುನ ಕಡಬೂರ, ರವಿ ಪಂಚಾಳ, ರಮೇಶ್ ಹಡಪದ್, ಶಶಿಕಾಂತ ಪೇಂದು, ಸುರೇಶ್ ಬಗಾಡೆ, ರಾಹುಲ್ ಬಗಾಡೆ, ಲಕ್ಷ್ಮೀಕಾಂತ ಹಬೀಬ್,ಯುವಕರುಗಳಾದ ಸೇರಿದಂತೆ ಅನೇಕ ಜನ ಯುವಕರು ಕಾರ್ಯಕರ್ಮದ ಯಶಸ್ವಿಗೆ ಶ್ರಮಿಸುತ್ತಿದ್ದಾರೆ. ಅವರೆಲ್ಲರಿಗೆ ಶ್ರೀ ಗಣೇಶನ ಕೃಪ ಆಶೀರ್ವಾದ ಸಿಗಲಿ ಎಂದು ಶುಭ ಹಾರೈಸಲಾಗಿದೆ.ರಾಜು ಬೆಣ್ಣಿ ನಿರೂಪಿಸಿ ಒಂದಿಸಿದರು.


ವರದಿ: ಆಕಾಶ ಸುಗಂಧಿ ಲಾಡ್

19
1483 views