logo

ಗುಬ್ಬಿ ತಾಲ್ಲೂಕು: ಹೇಮಾವತಿ ನಾಲೆಯಲ್ಲಿ ಅಪರಿಚಿತ ಗಂಡಸಿನ ಶವ ಪತ್ತೆ

ಗುಬ್ಬಿ ತಾಲೂಕು ಸಿ.ಎಸ್.ಪುರ ಠಾಣಾ ವ್ಯಾಪ್ತಿಯ ಚೀರನಹಳ್ಳಿ ಗ್ರಾಮದ ಬಳಿ ಹಾದು ಹೋಗುವ ಹೇಮಾವತಿ ನಾಲೆಯಲ್ಲಿ ಇಂದು ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ.

ಪೊಲೀಸರ ಪ್ರಾಥಮಿಕ ಮಾಹಿತಿ ಪ್ರಕಾರ, ಮೃತನ ವಯಸ್ಸು ಸುಮಾರು 50ರಿಂದ 55 ವರ್ಷವಾಗಿದ್ದು, ಎತ್ತರ ಸುಮಾರು 156 ಸೆಂ.ಮೀ. ಬಿಳಿ ಬಣ್ಣದ ಗಡ್ಡ, ಬೋಳು ತಲೆ ಹೊಂದಿದ್ದು, ಬಿಳಿ–ನೀಲಿ–ಕಪ್ಪು ಬಣ್ಣದ ಚೆಕ್ಸ್ ಲುಂಗಿ, ಆರೆಂಜ್ ಕಲರ್ ರೆಡಿಮೇಡ್ ಶರ್ಟ್ ಹಾಗೂ Rumex ಕಂಪನಿಯ ನೀಲಿ ಅಂಡರ್‌ವೇರ್ ಧರಿಸಿದ್ದಾನೆ.

ಮೃತನ ಗುರುತು ಇನ್ನೂ ಪತ್ತೆಯಾಗಿಲ್ಲ. ವಾರಸುದಾರರು ಅಥವಾ ಸಂಬಂಧಿಕರು ತಿಳಿದಲ್ಲಿ ಸಿ.ಎಸ್.ಪುರ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಪೊಲೀಸರು ವಿನಂತಿಸಿದ್ದಾರೆ.

ಸಂಪರ್ಕ ಸಂಖ್ಯೆ: PSI ಸಿ.ಎಸ್.ಪುರ – 9480802960

👉 ಶವದ ಗುರುತಿನ ಕುರಿತು ಮಾಹಿತಿ ನೀಡುವಂತೆ ಸಾರ್ವಜನಿಕರ ಸಹಕಾರವನ್ನು ಕೋರುತ್ತಾರೆ.

19
35 views