logo

ಮಂಗಳೂರು: ಟಿಂಟೆಡ್‌ ಗ್ಲಾಸ್‌ ವಿರುದ್ಧ ಪೊಲೀಸರ ನಗರದ ಎಲ್ಲೆಡೆ ಕಾರ್ಯಾಚರಣೆ

ಮಂಗಳೂರು: ಗ್ಲಾಸ್‌ಗಳಿಗೆ ಕಪ್ಪು ಬಣ್ಣದ ಫಿಲ್ಮ್‌ ಸನ್‌ ಅಥವಾ ಟಿಂಟೆಡ್‌ ಕ್ಲಾಸ್‌ ಅಂಟಿಸಿಕೊಂಡು ಸಂಚರಿಸುತ್ತಿರುವ ವಾಹನಗಳ ಪತ್ತೆಗೆ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಮಂಗಳೂರು ಪೊಲೀಸ್‌ ಕಮಿಷನರ್‌ ಅನುಪಮ್‌ ಅಗ್ರವಾಲ್‌ ತಿಳಿಸಿದ್ದಾರೆ.

ಮೇ 2ರಿಂದ 11ರ ವರೆಗೆ 10 ದಿನಗಳಲ್ಲಿ 504 ಕಾರುಗಳ ವಿರುದ್ಧ ಪ್ರಕರಣ ಕಾಖಲಿಸಿ ₹2.53 ಲಕ್ಷ ದಂಡ ವಿಧಿಸಲಾಗಿದೆ. ಅಲ್ಲದೇ ವಾಹನಗಳಿಗೆ ಅಳವಡಿಸಿರುವ ಟಿಂಟೆಡ್‌ ಗ್ಲಾಸ್‌, ಸ್ಟಿಕರ್‌ಗಳನ್ನು ವಾಹನ ಚಾಲಕರಿಂದಲೇ ತೆಗೆಸಿ ಸೂಕ್ತ ತಿಳಿವಳಿಕೆ ನೀಡಲಾಗಿದೆ. ಈ ವಿಶೇಷ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಅವರು ಹೇಳಿದ್ದಾರೆ.

ಮಂಗಳೂರು ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಸಂಚಾರ ಪೊಲೀಸ್‌ ವತಿಯಿಂದ ವಿವಿಧ ಕಡೆಗಳಲ್ಲಿ ವಿಶೇಷ ಚೆಕ್‌ಪೋಸ್ಟ್‌ಗಳನ್ನು ತೆರೆದು ವಾಹನಗಳ ತಪಾಸಣೆ ಹಾಗೂ ದಾಖಲಾತಿ ಪರಿಶೀಲನೆ ನಡೆಸಲಾಗುತ್ತಿದೆ.

ವಾಹನಗಳಲ್ಲಿ ಟಿಂಟೆಡ್‌ ಗ್ಲಾಸ್‌ ಬಳಸದಂತೆ ಹಾಗೂ ಅಂತಹ ಟಿಂಟೆಡ್‌ ಗ್ಲಾಸ್‌ಗಳನ್ನು ತೆರವುಗೊಳಿಸುವಂತೆ ಸುಪ್ರೀಂ ಕೋರ್ಟ್‌ನ ಆದೇಶ ಇದೆ. ವಾಹನಗಳ ಗಾಜುಗಳಿಗೆ ಇದನ್ನು ಅಂಟಿಸುವಂತಿಲ್ಲ. ಸಾರ್ವಜನಿಕರು ತಮ್ಮ ವಾಹನಗಳಿಗೆ ಅಂಟಿಸಿರುವ ಇಂತಹ ವಸ್ತುಗಳನ್ನು ಸ್ವತಃ ತೆಗೆದು ಪೊಲೀಸ್‌ ಇಲಾಖೆಯಿಂದೊಗೆ ಸಹಕರಿಸಬೇಕು. ಈ ನಿಯಮ ಉಲ್ಲಂಘಿಸುವವರ ವಿರುದ್ಧ ಭದ್ರತೆ ಮತ್ತು ಸುರಕ್ಷತೆಯ ದೃಷ್ಟಿಯಿಂದ ಮೋಟಾರು ವಾಹನ ಕಾಯ್ದೆಯನ್ವಯ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ

0
442 views