logo

ಬೆಂ.ಗ್ರಾಮಾಂತರ ಜಿಲ್ಲೆಯಲ್ಲಿ ಶೇ.81 ಮತದಾನ

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಭಾಗವಾದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ನಡೆದಿದೆ.

ಶುಕ್ರವಾರ ಬೆಳಗ್ಗೆ 7 ಗಂಟೆಗೆ ಆರಂಭವಾದ ಮತದಾನವು ಸಂಜೆ 6 ಗಂಟೆಯ ವರೆಗೂ ನಡೆದಿದ್ದು, ಅಂದಾಜು ಶೇ.81.90 ಮತದಾನವಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ 1137 ಮತಗಟ್ಟೆಯಲ್ಲಿ ಮತದಾನ ನಡೆದಿದ್ದು, ಬೆಳಗ್ಗೆ 7 ಗಂಟೆಗೆ ಆರಂಭವಾದ ಮತದಾನ ಪ್ರಕ್ರಿಯೆಗೆ ಕೆಲವೆಡೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದರೆ, ಕೆಲವೆಡೆ ಮತದಾರರು ಬೆಳಗ್ಗೆ ನಿಧಾನಗತಿಯಲ್ಲಿ ಮತಗಟ್ಟೆಗಳ ಕಡೆಗೆ ಆಗಮಿಸಿದರು.
ದೇವನಹಳ್ಳಿ ತಾಲೂಕಿನ ಕಾರಹಳ್ಳಿ ಗ್ರಾಮದ ವಿಶೇಷ ಸಖಿ ಮತಗಟ್ಟೆ ಕೇಂದ್ರಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಶಿವಶಂಕರ್, ಜಿಲ್ಲಾ ಪಂಚಾಯಿತಿ ಸಿಇಒ ಅನುರಾಧ ಬೇಟಿ ನೀಡಿ ಪರಿಶೀಲಿಸಿದರು.
ಈ ಮೂಲಕ ಜಿಲ್ಲೆಯಲ್ಲಿ ಬೆಳಗ್ಗೆ 9 ಗಂಟೆವರೆಗೆ ಕೇವಲ ಶೇ.8.68 ರಷ್ಟು ಮಾತ್ರ ಮತದಾನವಾಗಿತ್ತು. ನಂತರ ಕೆಲವೆಡೆ ಮತದಾನ ಚುರುಕು ಪಡೆದುಕೊಂಡಿದ್ದು, 3 ಗಂಟೆ ವೇಳೆಗೆ ಜಿಲ್ಲೆಯಾದ್ಯಂತ ಶೇ.59.42 ರಷ್ಟು ಮತದಾರರು ಮತದಾನದ ಹಕ್ಕು ಚಲಾಯಿಸಿದರು. ಕೆಲ ಮತಗಟ್ಟೆಗಳಲ್ಲಿ ಇವಿಎಂ ಯಂತ್ರದ ದೋಷದಿಂದ ಮತದಾನ ಕೆಲ ಕಾಲ ತಡವಾಗಿತ್ತು. ಇನ್ನೂ ಹಲವೆಡೆ ಮತಗಟ್ಟೆಗಳಿಗೆ ಮೊಬೈಲ್ ನಿರ್ಬಂಧದ ಹಿನ್ನೆಲೆ ಮತದಾರರು ಮೊಬೈಲ್ ತರದಂತೆ ತಿಳಿಸಿದ ಸಿಬ್ಬಂದಿ ಮೇಲೆ ಗರಂ ಆದ ಘಟನೆಗಳು ಅಲ್ಲಲ್ಲಿ ಕಂಡು ಬಂದಿತ್ತು. ಇದನ್ನು ಹೊರತುಪಡಿಸಿ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಲ್ಲೂ ಕೂಡ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ಪೂರ್ಣಗೊಂಡಿದ್ದು, ಅಭ್ಯರ್ಥಿಗಳ ಭವಿಷ್ಯ ಇವಿಎಂನಲ್ಲಿ ಭದ್ರವಾಗಿದೆ.

ಆಕ್ರೋಶ ವ್ಯಕ್ತಪಡಿಸಿ, ಮತದಾನ ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿದ್ದರು. ಗ್ರಾಮದಲ್ಲಿ 380 ಮತಗಳನ್ನು, ಇಡೀ ಗ್ರಾಮಸ್ಥರು ಒಕ್ಕೊರಲಿನಿಂದ ಮತದಾನ ಬಹಿಷ್ಕರಿಸುವ ನಿರ್ಧಾರ ತೀರ್ಮಾನ ಕೈಗೊಂಡಿದ್ದರು. ಗ್ರಾಮದ ಸಮಸ್ಯೆಗಳು ಬಗೆಹರಿಸುವವರೆಗೂ ಯಾವುದೇ ಚುನಾವಣೆಗಳಲ್ಲಿ ಮತದಾನ ಮಾಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಮಹಿಳೆಯರು, ಮಕ್ಕಳು ಸೇರಿ ಪ್ರತಿಭಟನೆ ನಡೆಸಿದರು. ಕೂಡಲೇ ಎಚ್ಚೆತ್ತ ತಾಲೂಕು ಆಡಳಿತ ಸ್ಥಳಕ್ಕೆ ಆಗಮಿಸಿ. ಮತದಾರರನ್ನು ಮನವೊಲಿಸುವಲ್ಲಿ ಯಶಸ್ವಿಯಾದರು.

ಜಿಲ್ಲೆಯಲ್ಲಿ ಉತ್ತಮ ಮತದಾನ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಒಟ್ಟು 8, 98, 448 ಮತದಾರರಿದ್ದು, ಪುರುಷರು 4, 44, 084 ಹಾಗೂ 2,06,719 ಮತದಾರರು ಮತಚಲಾಯಿಸಿದ್ದು, ಇವಿಎಂ ದೋಷ, ತಡವಾದ ಮತದಾನ: ಮಹಿಳೆಯರು 4, 54.221 ಹಾಗೂ ಇತರೆ 143 ಮಂದಿ ಇದ್ದರು. ಅದರಲ್ಲಿ ಹೊಸಕೋಟೆಯಲ್ಲಿ ಒಟ್ಟು 2,39,157 ಮತದಾರರಿದ್ದು 6 ಗಂಟೆಯ ವೇಳೆಗೆ ಪುರುಷರು 1,18, 662 ಮತದಾರರಲ್ಲಿ 1,03,828 ಮಂದಿ ಮತಚಲಾಯಿಸಿದರೆ ಮಹಿಳೆಯರು 1,20, 474ರಲ್ಲಿ 1,02,878 ಮತದಾನ ಮಾಡಿದ್ದಾರೆ. ದೇವನಹಳ್ಳಿಯಲ್ಲಿ 1,09, 443 ಮಹಿಳಾ ಮತದಾರರಲ್ಲಿ 88,596 ಮಂದಿ ಮತಚಲಾಸಿದರೆ ಒಟ್ಟು 2, 16, 704 ಮತದಾರರ ಪೈಕಿ 1, 79,189 ಮಂದಿ ಮತಚಲಾಯಿಸಿ ದ್ದಾರೆ.ದೊಡ್ಡಬಳ್ಳಾಮರದಲ್ಲಿ 2, 20,268 ಮತದಾರರ ಪೈಕಿ 1, 76,562 ಮಂದಿ ಮತಚಲಾಯಿಸಿದ್ದು, ಮಹಿಳೆ ಮತದಾರರು 1, 11, 346 ಮಂದಿ ಇದ್ದು, 87,895 ಮಂದಿ ಮತದಾನ ಮಾಡಿದ್ದಾರೆ. ನೆಲಮಂಗಲದಲ್ಲಿನ 2,22,319 ಮತದಾರರಲ್ಲಿ 1,73, 357 ಮಂದಿ ಮತದಾನ ಮಾಡಿದ್ದು ಮಹಿಳೆಯರು 1, 12,958 ಮಂದಿ ಇದ್ದು 86,819 ಮಂದಿ ಮತದಾನ ಮಾಡಿದ್ದಾರೆ. ಒಟ್ಟಾರೆ ಜಿಲ್ಲೆಯಲ್ಲಿ 4, 44, 084 ಪುರುಷರ

ಬಿರುಬಿಸಿಲಿನಲ್ಲಿ ಮತದಾನದ ಸಂಭ್ರಮ !
ತೂಬಗೆರೆಯಲ್ಲಿ ಲಂಬಾಣಿ ಸಮುದಾಯದ ಮಹಿಳೆಯರು ಮತ ಚಲಾಯಿಸಿದರು.
6 ಗಂಟೆ ವೇಳೆಗೆ
ಶೇಕಡ ಶೇ. 82.69% ರಷ್ಟು ಮತದಾನವಾಗಿದೆ.

ಹೊಸಕೋಟೆಯಲ್ಲಿ ಮತಚಲಾಯಿಸಿದ
ಡಾ. ಶ್ರೀ ಸಿದ್ದರಾಜು ಸ್ವಾಮೀಜಿ ಮತಚಲಾಯಿಸಿದರು. ದೇವನಹಳ್ಳಿ ಜೂನಿಯರ್ ಕಾಲೇಜಿನ ಮತಗಟ್ಟೆಯಲ್ಲಿ ಮಾಜಿ ಶಾಸಕ ನಾರಾಯಣಸ್ವಾಮಿ ಮತ ಚಲಾಯಿಸಿದರು. ಅಣ್ಣೇಶ್ವರ ಗ್ರಾಮದ ಮತಗಟ್ಟೆ ಕೇಂದ್ರದಲ್ಲಿ ಮಾಜಿ ಶಾಸಕ ಮರಿಯಪ್ಪ ಪತ್ನಿಯೊಂದಿಗೆ ಮತ ಚಲಾಯಿಸಿದರು.

ಬಿಸಿಲಿಗೆ ಮತದಾನ ನಿಧಾನ! ಜಿಲ್ಲೆಯಲ್ಲಿ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿ
ಹಲವೆಡೆ ಮತದಾನ ಚುರುಕುಗೊಂಡಿತ್ತು. ಆದರೆ ಬಿಸಿಲ ಝಳ ಹೆಚ್ಚಿದಂತೆ ಹಲವು ಮತಗಟ್ಟೆಗಳಲ್ಲಿ ಮತದಾನ ಪ್ರಮಾಣ ಕೊಂಚ ಇಳಿಕೆ ಕಂಡಿತ್ತು. ಕೆಲವೆಡೆ ಮತಗಟ್ಟೆಗಳು ಮಧ್ಯಾಹ್ನದ ವೇಳೆ ಬಿಕೋ ಎಂದಿದ್ದು ಕೂಡ ಕೆಲವೆಡೆ ಕಂಡು ಬಂದಿತ್ತು, ಇನ್ನೂ ಸಂಜೆ 3 ಗಂಟೆಯ ನಂತರ ಮತದಾನ ಮತ್ತೆ ಚುರುಕಾಗಿತ್ತು. ಗ್ರಾಮೀಣ ಭಾಗದಲ್ಲಿ ಮತದಾನ ನಗರ ಪ್ರದೇಶಕ್ಕಿಂತ ಉತ್ತಮವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಮತಚಲಾಯಿಸಿದರು.

ಜಿಲ್ಲೆಯಲ್ಲಿನ 4 ವಿಧಾನಸಭಾ ಕ್ಷೇತ್ರದಲ್ಲೂ ಮತದಾನ ನಡೆದಿದೆ. ಇದರಲ್ಲಿ ಹಲವು ಮತಗಟ್ಟೆಗಳಲ್ಲಿ ಇವಿಎಂ ಸಮಸ್ಯೆ ಕಂಡುಬಂದಿದೆ. ಹೊಸಕೋಟೆಯಲ್ಲಿನ 3 ಮತಗಟ್ಟೆಗಳಲ್ಲಿ ಇವಿಎಂ ಸಮಸ್ಯೆಯಾಗಿ ಮತದಾನಕ್ಕೆ ಕೊಂಚ ಆಡಚಣೆ ಉಂಟಾಗಿತ್ತು. ಇನ್ನು ದೇವನಹಳ್ಳಿಯ ಬನ್ನಮಂಗಲ ಮತಗಟ್ಟೆಯಲ್ಲಿ ಇವಿಎಂ

21
3569 views