logo

ಬಿರು ಬಿಸಿಲಿನ ಬೇಗೆಗೆ ನೆರಳಿನ ಆಸರೆಯಾದ ಗ್ರಾಮ ಅಶ್ವತ್ಥ್ಕಟ್ಟೆ...! ಮತದಾನ ನಂತರ ಅಶ್ವತ್ಥ್ಕಟ್ಟೆಗೆ ಮೊರೆ | ಬೇಸಿಗೆಗೆ ತಂಪೆರೆದ ಜೋಡಿ ಮರಗಳು

ದೇವನಹಳ್ಳಿ: ಬಿರು ಬೇಸಿಗೆಗೆ ಮನೆಯಲ್ಲಿರದೆ ಕಂಗಾಲಾಗಿದ್ದ ಜನರಿಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣೆ ವರದಾನವಾಗಿದ್ದು, ಮತದಾನ ಮಾಡಿದ ನಂತರ ಗ್ರಾಮಸ್ಥರೆಲ್ಲರೂ ಒಂದೇ ಕಡೆ ಸೇರುವುದರ ಮೂಲಕ ಪ್ರಜಾಪ್ರಭುತ್ವದ ಹಬ್ಬವನ್ನು ಆಚರಿಸಿದರು.

ದೇವನಹಳ್ಳಿ ತಾಲೂಕಿನ ದ್ಯಾವರಹಳ್ಳಿ ಗ್ರಾಮದಲ್ಲಿರುವ ಮತಗಟ್ಟೆ ಕೇಂದ್ರದ ಸುಮಾರು 200ಮೀಟರ್ ದೂರದಲ್ಲಿರುವ ಅಶ್ವತ್ಥ್ ಕಟ್ಟೆ ಬರುವ ಮತದಾರರಿಗೆ ಒಂದಿಷ್ಟು ವಿಶ್ರಾಂತಿಸುವಂತೆ ಕೈ ಬೀಸಿ ಕರೆಯುವಂತಹ ವಾತಾವರಣ ನಿರ್ಮಾಣವಾಗಿತ್ತು.

ಮತದಾರರು ತಮ್ಮ ತಮ್ಮ ಮತಗಳನ್ನು ಚಲಾಯಿಸುವುದರ ಮೂಲಕ ಗ್ರಾಮದಲ್ಲಿರುವ ಬೃಹತ್ ವಿಸ್ತೀರ್ಣದ ಅಶ್ವತ್ಥ್ಕಟ್ಟೆಯ ಮೇಲೆ ಕುಳಿತುಕೊಂಡರೆ, ಕೆಲವರು ಚಾಪೆಯನ್ನು ಹಾಸಿ ಮಲಗಿರುವ ದೃಶ್ಯ ಕಂಡುಬಂದಿದೆ. ಒಂದೆಡೆ ಎಲ್ಲರೂ ಒಗ್ಗೂಡಿ ಪ್ರಚಾ ಪ್ರಭುತ್ವದ ಹಬ್ಬದ ಭಾಗವಾಗಿ ಮತದಾರರಿಗೆ ಬೃಹತ್ ಜೋಡಿ ಮರಗಳು ನೆರಳು ಮತ್ತು ಅಹ್ಲಾದಕರ ಗಾಳಿಯನ್ನು ತೆಗೆದುಕೊಳ್ಳುವುದರ ಮೂಲಕ ಸಂತೋಷವನ್ನು ಹಂಚಿಕೊAಡ ದೃಶ್ಯ ಕಂಡುಬಂದಿದೆ.

ಅಭ್ಯರ್ಥಿ ಪರ ಮತ ಕೇಳುವವರಿಗೂ ಸಹ ಯಾರಿಗೂ ಕರೆಯದಿದ್ದರೂ ಸಹ ನೇರವಾಗಿ ಅಲ್ಲಿಗೆ ಬಂದಂತಹ ಮತದಾರರು ಮತಚೀಟಿ ಬರೆಸಿಕೊಂಡು ಮತಗಟ್ಟೆಗೆ ತೆರಳಿ ನೇರವಾಗಿ ಮನೆಗಳಿಗೆ ಅಥವಾ ಇನ್ನಿತರೆ ಕೆಲಸಗಳಿಗೆ ಹೋಗುವ ಬದಲಿಗೆ ಒಂದಿಷ್ಟು ವಿಶ್ರಾಂತಿ ಪಡೆದು ಹೋಗೋಣ ಎಂಬಂತೆ ಅಲ್ಲಿಯೇ ಠಿಕಾಣಿ ಹೂಡಿದ್ದು ವಿಶೇಷವಾಗಿತ್ತು.
….......................…............................
ಇಂತಹ ವಾತಾವರಣ ಸಿಗುವುದು ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ. ನಮ್ಮ ಪೂರ್ವಿಕರು ಅವರ ಪೀಳಿಗೆಗಾಗಿ ಸ್ಥಾಪಿಸಿದ್ದ ಅಶ್ವತ್ಥ್ಕಟ್ಟೆ ಇದೀಗ ಗ್ರಾಮದ ಪ್ರತಿಯೊಬ್ಬರಿಗೂ ಜೀವನಾಡಿಯಾಗಿದೆ. ಬೇಸಿಗೆಯಿಂದ ತಪ್ಪಿಸಿಕೊಳ್ಳಲು ಈ ಅಶ್ವತ್ಥ್ಕಟ್ಟೆ ಮೇಲಿರುವ ಜೋಡಿ ಅರಳಿ ಮರಗಳು ಆಸರೆಯಾಗಿದೆ.
- ವಿ.ನಾರಾಯಣಸ್ವಾಮಿ | ಮಾಜಿ ಅಧ್ಯಕ್ಷ, ಕುಂದಾಣ ಗ್ರಾಪಂ.

8
2855 views