ಬೆಂಗಳೂರ: ಗೃಹಲಕ್ಷ್ಮಿ ಯೋಜನೆಯ ಹಿಂಭಾಕಿ ಹಣಕ್ಕಾಗಿ ಹೈಕೋರ್ಟ್ ಮೊರೆ
ಬೆಂಗಳೂರ: ರಾಜ್ಯ ಕಾಂಗ್ರೇಸ್ ಸರಕಾರದ ಗೃಹಲಕ್ಷ್ಮಿ ಯೋಜನೆಯ ಹಿಂಭಾಕಿ ಹಣ ತಲುಪದ ಹಿನ್ನೆಲೆಯಲ್ಲಿ ಆರ್. ಗಂಗಾ ಮತ್ತು ಜಿ. ಡಿ. ಪವಿತ್ರಾ ಎಂಬ ಇಬ್ಬರು ಮಹಿಳೆಯರು ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದಾರೆ. ಅವರು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ್ದು, ಹಿಂಭಾಕಿ ಹಣ ಬಿಡುಗಡೆ ಮಾಡಲು ಕೋರಿದ್ದಾರೆ.
ಈ ಮಹಿಳೆಯರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ, 2025 ರ ಫೆಬ್ರುವರಿ ಮತ್ತು ಮಾರ್ಚ್ ತಿಂಗಳುಗಳ ಹಿಂಭಾಕಿ ಹಣ ಬಿಡುಗಡೆ ಮಾಡುವಂತೆ ಆದೇಶ ನೀಡುವಂತೆ ಹೈಕೋರ್ಟ್ ಬಳಿ ವಿನಂತಿಸಿದ್ದಾರೆ. ಗೃಹಲಕ್ಷ್ಮಿ ಯೋಜನೆಯ ಮಾಸಿಕ ಧನ ಸಹಾಯ ಸರಿಯಾಗಿ ತಲುಪುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.