ಸಾವಿರಾರು ಕುಟುಂಬಗಳಿಗೆ ಹಣ ವಂಚಿಸಿದ ಸೋಲಾಪೂರ್ ಮೂಲದ ಬಿವಿಜಿಕಂಪನಿ
ಕಲಬುರಗಿ ನಗರದ ತಾರ್ಫೈಲ್ ಬಡಾವಣೆಯ ನಿವಾಸಿ ಗುರುಬಾಯಿ ಕಟ್ಟಿಮನಿ ಪತ್ರಿಕಾಗೋಷ್ಠಿ ಕರೆದು, ಸೋಲಾಪುರ್ ಮೂಲದ ಬಿವಿಜಿ ಕಂಪನಿ ಕೆಲವು ವರ್ಷಗಳಿಂದ ಸುಮಾರು 2000ಕ್ಕೂ ಅಧಿಕ ಕುಟುಂಬಗಳಿಂದ ಆರ್ ಡಿ ಮತ್ತು ಎಫ್ ಡಿ ಹೆಸರಲ್ಲಿ ಸುಮಾರು 40-50 ಏಜೆಂಟ್ಗಳ ಮುಖಾಂತರ ಹಣ ಸಂಗ್ರಹಿಸಿ ಹಿಂದಿರುಗಿಸುವ ವೇಳೆ ಕಚೇರಿ ಮುಚ್ಚಿ ಓಡಿಹೋದರೆಂದು ಗುರು ಬಾಯಿ ತಿಳಿಸಿದ್ದಾರೆ. ಏಜೆಂಟರಿಗೆ ಜನರು ಹಣ ಹಿಂದಿರಿಸಲು ಒತ್ತಾಯಿಸುತ್ತಿದ್ದಾರೆ. ಏಜೆಂಟರು ಪೊಲೀಸರಿಗೆ ಮಧ್ಯಪ್ರವೇಶಿಸಲು ಮೂರೆ ಹೋಗಿದ್ದಾರೆ ಎಂದರು.