logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಶರಣ ಸಿರಿಸಗಿ ಪಂಚಾಯತ್ ಅಡಿಯಲ್ಲಿ ನೀರಿನ ಗಂಭೀರ ಸಮಸ್ಯೆ ಪರಿಹಾರಕ್ಕೆ ತಾ.ಪಂ. ಕಾರ್ಯದರ್ಶಿ ಭರವಸೆ

ಕಲಬುರಗಿ ನಗರದ ಶರಣ ಸಿರಸಿಗಿ ಮಡ್ಡಿಯಲ್ಲಿ ಕಳೆದ ಒಂದೆರಡು ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆ ತಾರಕಕ್ಕೆರಿದ್ದು ಪಿಡಿಓ ಅಮರನಾಥರ ಗಮನಕ್ಕೆ ತಂದಾಗ ಕೂಡಲೇ ಸ್ಪಂದಿಸಿದ ಅವರು ಕೆಟ್ಟು ನಿಂತ ಬೋರ್ವೆಲ್ ಮಷೀನ್ ಬದಲಾಯಿಸಿ ಹೊಸ ಮಷೀನ್ ಕೂಡಿಸಿದರೂ, ಸಮಸ್ಯೆ ಬಗೆಹರಿಯಲಿಲ್ಲ ಬೋರ್ವೆಲ್ ನಲ್ಲಿ ನೀರಿಲ್ಲವೆಂದು ತಿಳಿದು ಅವರು ತಾ.ಪಂ. ಕಾರ್ಯದರ್ಶಿ ಮ. ಸೈಯದ್ ಪಟೇಲ್ ರವರ ಗಮನಕ್ಕೆ ತಂದರು. ಸಮಸ್ಯೆ ಬಗೆಹರಿಸುವ ಭರವಸೆ ಪಟೇಲ್ ನೀಡಿದ್ದಾರೆ ಎಂದರು.

0
889 views

Comment