logo

ಯಾದಗಿರಿಯಲ್ಲಿ ಇಂಜಿನಿಯರಿಂಗ್ ಕಾಲೇಜು ಮಂಜೂರಿಗೆ ಸದನದಲ್ಲಿ ಧ್ವನಿ ಎತ್ತಿ : ವಿಶ್ವರಾಧ್ಯ ಮನವಿ

ಯಾದಗಿರಿ:ನಗರದಲ್ಲಿ ಇಂಜಿನಿಯರಿಂಗ್ ಕಾಲೇಜು ಮಂಜೂರು ಕುರಿತು ಬೆಳಗಾವಿ ಅಧಿವೇಶನದಲ್ಲಿ ಧ್ವನಿ ಎತ್ತಿ ಕಾಲೇಜು ಮಂಜೂರು ಮಾಡಿಸುವಂತೆ ಆಗ್ರಹಿಸಿ ಇಂದು ನಮ್ಮ ಕರ್ನಾಟಕ ಸೇನೆ ಜಿಲ್ಲಾ ಅಧ್ಯಕ್ಷ ವಿಶ್ವರಾಧ್ಯ ದಿಮ್ಮೆ ನೇತೃತ್ವದಲ್ಲಿ ಯಾದಗರಿ ಮತಕ್ಷೇತ್ರ ಶಾಸಕರಾದ ಚನ್ನಾರೆಡ್ಡಿ ಪಾಟೀಲ್ ತುನ್ನೂರ ರವರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.ಯಾದಗಿರಿ ಜಿಲ್ಲೆಯಾಗಿ ಸುಮಾರು 15 ವರ್ಷಗಳು ಕಳೆದಿವೆ ಅದರೂ ಕೂಡ ಇಲ್ಲಿಯವರೆಗೆ ಇಂಜಿನಿಯರಿಂಗ್ ಕಾಲೇಜ್ ಮಂಜೂರು ಮಾಡದಿರುವುದರಿಂದ ಈ ಭಾಗದ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆ ಆಗುತ್ತೆ ಬಡ ವಿದ್ಯಾರ್ಥಿಗಳು ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಅತಿ ಹೆಚ್ಚು ಶುಲ್ಕ ಕೊಟ್ಟು ಓದಲು ಆಗುತ್ತಿಲ್ಲ ಕೆಲ ಬಡವರು ರೈತರ ಮಕ್ಕಳ ಇಂಜಿನಿಯರಿಂಗ್ ಕಲಿಕೆಯ ಕನಸು ಕನಸಾಗಿಯೇ ಉಳಿದಿದೆ ಹಲವು ಜಿಲ್ಲೆಗಳ ತಾಲೂಕು ಕೇಂದ್ರದಲ್ಲಿ ಇಂಜಿನಿಯರಿಂಗ್ ಕಾಲೇಜು ಮಂಜೂರು ಆಗಿವೆ ಆದರೆ ನಮ್ಮ ಜಿಲ್ಲೆಗೆ ಸರ್ಕಾರಗಳು ಇಂಜಿನಿಯರಿಂಗ್ ಕಾಲೇಜ್ ಮಂಜೂರು ಮಾಡದೆ ಮಲತಾಯಿ ಧೋರಣೆ ತೋರುತ್ತಿರುವುದು ಸರಿಯಲ್ಲ ತಾವು ಸರ್ಕಾರದ ಗಮನಕ್ಕೆ ತಂದು ಯಾದಗಿರಿ ಜಿಲ್ಲಾ ಕೇಂದ್ರದಲ್ಲಿ ಇಂಜಿನಿಯರಿಂಗ್ ಕಾಲೇಜ್ ಸ್ಥಾಪಿಸುವಂತೆ ಇದೇ ತಿಂಗಳು ನಡೆಯಲಿರುವ ಬೆಳಗಾವಿಯ ಅಧಿವೇಶನದ ಸದನದಲ್ಲಿ ಧ್ವನಿ ಎತ್ತಿ ಕಾಲೇಜು ಮಂಜೂರಾತಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.ಈ ಸಂದರ್ಭದಲ್ಲಿ ನಮ್ಮ ಕರ್ನಾಟಕ ಸೇನೆ ಪದಾಧಿಕಾರಿಗಳಾದ ಭೀಮು ಪೂಜಾರಿ,ಅಬ್ದುಲ್ ಅಜೀಜ್, ರಾಜು ಗುಂಡಗುರ್ತಿ, ವಿಶ್ವಜಿತ್ ಕಟ್ಟಿ, ಶರಣು,ಮಲ್ಲಿಕಾರ್ಜುನ್, ಚಂದ್ರಶೇಖರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು​

3
2727 views