logo

ಇಳಕಲ್ ನಗರ ಪತ್ರಕರ್ತರು ಅಂಜಿ ಮನೆಯಲ್ಲಿ ಕೂತಿದ್ದಾರೆ... ಮಾಜಿ ಶಾಸಕ ಡಿ ಜಿ ಪಾಟೀಲ ಹೇಳಿಕೆ

ಇಳಕಲ್ ನಗರ ಪತ್ರಕರ್ತರು ಅಂಜಿ ಮನೆಯಲ್ಲಿ ಕೂತಿದ್ದಾರೆ...
ಮಾಜಿ ಶಾಸಕ ಡಿ ಜಿ ಪಾಟೀಲ ಹೇಳಿಕೆ
ಇದನ್ನು ಖಂಡಿಸಿ ಬಹಿರಂಗ ಕ್ಷಮೆಗೆ ಆಗ್ರಹ
ಇಳಕಲ್:- ನಗರದ ಪತ್ರಕರ್ತರು ಶಾಸಕರಿಗೆ ಅಂಜಿ ಮನೇಲಿ ಕೂತಿದ್ದಾರೆ ನಮ್ಮ ಪಕ್ಷದ ಯಾವುದೇ ಸುದ್ದಿ ಮಾಡುವುದಿಲ್ಲ ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಹುನಗುಂದ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು.
ಇದನ್ನು ತೀವ್ರವಾಗಿ ಖಂಡಿಸಿರುವ ಸಮಸ್ತ ಪತ್ರಕರ್ತರು ಮಾಜಿ ಶಾಸಕ ದೊಡ್ಡನಗೌಡ ಪಾಟೀಲರು ಬಹಿರಂಗ ಕ್ಷಮೆ ಯಾಚಿಸಬೇಕು ಅಲ್ಲಿಯವರೆಗೆ ಅವರ ಯಾವುದೇ ಸುದ್ದಿಗಳನ್ನು ಪತ್ರಿಕೆಗಳಿಗೆ ಹಾಕಲು ಬಹಿಸ್ಕರಿಸುವುದಾಗಿ ಇಳಕಲ್ ನಗರದ ಸಮಸ್ತ ಪತ್ರಕರ್ತರು ನಿರ್ಧರಿಸಿದ್ದಾರೆ. ಮಾಜಿ ಶಾಸಕರು ಕೆಲವೇ ಕೆಲವು ಪತ್ರಕರ್ತರನ್ನು ಕರೆದು ಯಾರನ್ನು ಕರೆಯದೆ ಯಾವುದೇ ಸಭೆ ಸಮಾರಂಭ ಮಾಡುತ್ತಾರೆ ಅವರು ಯಾರಿಗೂ ಹೇಳುವುದಿಲ್ಲ ,ಈ ರೀತಿ ಹೇಳಿಕೆ ನೀಡಿರುವುದು ಬಹಳಷ್ಟು ಪತ್ರಕರ್ತರಿಗೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಮಾಜಿ ಶಾಸಕರು ಹಿಂಬಾಲಕರು ಯಾವುದೇ ಮಾಹಿತಿಯನ್ನು ಸರಿಯಾದ ರೀತಿಯಲ್ಲಿ ಪತ್ರಕರ್ತರಿಗೆ ತಿಳಿಸುವುದಿಲ್ಲ ಹೀಗಾಗಿ ಯಾವ ರೀತಿ ಅವರ ವರದಿಗಳನ್ನು ಮಾಡಬೇಕು ಎಂದು ಎಲ್ಲ ಪತ್ರಕರ್ತರು ಪ್ರಶ್ನಿಸುತ್ತಾರೆ..
ಮೂರು ಬಾರಿ ಶಾಸಕರಾಗಿರುವ ಅವರು ಈ ರೀತಿ ಪತ್ರಕರ್ತರಿಗೆ ಬಹಿರಂಗವಾಗಿ ಮಾತನಾಡಿರುವುದು ತಪ್ಪು ಅವರ ಬೆಂಬಲಿಗರು ಒರ್ವ ಪತ್ರಕರ್ತನ ಕಚೇರಿಗೆ ನುಗ್ಗಿ ಹಲ್ಲೆ ಯತ್ನ ನಡೆಸಿರುವುದು ಸಹ ಖಂಡನೀಯವಾಗಿದೆ.

14
2088 views