logo

ಹಿರಿಯೂರು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಗೈರು ಆಜಾರು ಹಾಗೂ ಸಿಬ್ಬಂದಿಗಳ ವರ್ತನೆ ಸರಿ ಇಲ್ಲ ಎಂದು ಭಾರತೀಯ ದಲಿತ ಸಂಘರ್ಷ ಸಮಿತಿಯ ವತಿಯಿಂದ ಮನವಿ.

ಹಿರಿಯೂರು ಸರ್ಕಾರಿ ಆಸ್ಪತ್ರೆಯಲ್ಲಿ ರಾತ್ರಿಯ ವೇಳೆ ಚಿಕಿತ್ಸೆಗೆಂದು ಸಾರ್ವಜನಿಕರು ತೆರಳಿದಾಗ ಡಾಕ್ಟರ್ ಗಳೇ ಇರುವುದಿಲ್ಲ ಸಿಬ್ಬಂದಿಗಳು ನಿರ್ಲಕ್ಷ ತೋರುವುದು ಗಾಯಾಳು ಹತ್ತಿರ ಹಣ ಪೀಕುವುದ ಉದಾಸೀನವಾಗಿ ಮಾತನಾಡುವುದು ಚೀಟಿ ಮಾಡಿಸುವರ ಬಳಿ 10 ನಿಮಿಷ ನಿಂತುಕೊಂಡು ಏನು ಮಾಡುತ್ತಿದ್ದಾರೆ ಎಂದು ವೀಕ್ಷಣೆ ಮಾಡುವುದಕ್ಕೂ ಬಿಡುವುದಿಲ್ಲ ಯಾಕೆಂದರೆ ಇಲ್ಲಿ ಹಣ ವಹಿವಾಟು ಮಾಡುವುದು ಇಲ್ಲಿಂದಲೇ ಪ್ರಾರಂಭ ಚೀಟಿ ಮಾಡಿಸುವಾಗ ಹಣ ಕೇಳುತ್ತಾರೆ ಹಣ ಕೇಳಿದರೆ ಚೀಟಿಗೆ ರೂಲ್ಸ್ ನ ಪ್ರಕಾರ ಒಂದು 10ರೂ 5ರೂ ಇದ್ದರೆ ಇವರ ನಿರ್ಲಕ್ಷದಿಂದ ಹಲ್ಲು ಗಿಂಜಿತ್ತಾ ಚಿಲ್ಲರೆ ಇಲ್ಲ ಎಂದು ಗದರುತ್ತಾ ನಿಯಮದ ಪ್ರಕಾರ ಇರುವ ಹಣವನ್ನು ಕಟ್ಟಿಸಿ ಕೊಳ್ಳದೆ ಪಾಪ ಹಳ್ಳಿಯಿಂದ ಹಾಗೂ ಅಮಾಯಕರಿಂದ ಚಿಲ್ಲರೆ ಕೊಡದೆ ನಾಟಕವಾಡುತ್ತ ಮಿಕ್ಕಿರವಹಣ ಉಳಿದರೆ ಸಾಕು ಎನ್ನುವ ಮನೋಭಾವ ಇಟ್ಟುಕೊಂಡು ಕೆಲಸ ನಿರ್ವಹಿಸುವ ಈ ಸಿಬ್ಬಂದಿಗಳು ಮಾಧ್ಯಮದವರು ಹೋದರೆ ಏಕವಚನದಲ್ಲಿಯೇ ನೀನು ಯಾರು ಎಂದು ಗದರಿ ಬಿಡುತ್ತಾರೆ ಮಾಧ್ಯಮದವರಿಗೆ ಈ ರೀತಿ ನಡೆದುಕೊಳ್ಳುತ್ತಾರೆಂದರೆ ಇಲ್ಲಿಗೆ ಬರುವ ಜನರು ಅಮಾಯಕರನ್ನು ಯಾವ ರೀತಿ ಹೆದರಿಸಿಬಿಡುತ್ತಾರೆ ಎಂದರೆ ಹೇಳ ತ್ತೀರದು ಇವರಿಗೆ ಸಾರ್ವಜನಿಕರ ಕೆಲಸ ಮಾಡುವ ತರಬೇತಿ ನೀಡಬೇಕಾಗಿರುತ್ತದೆ ಇವರ ಮನೆಯ ಬಳಿ ಹೋಗಿ ನಿಂತಿದ್ದಾರೆ ಎಂಬ ಭಾವನೆಯಿಂದ ಕೆಲಸ ಮಾಡುತ್ತಾರೆ, ಸಾರ್ವಜನಿಕ ಆಸ್ಪತ್ರೆಯಲ್ಲಿ ಕೆಲಸ ಮಾಡುವಾಗ ನಯ ವಿನಯದಿಂದ ನೋವಿನಲ್ಲಿ ಬಂದ ಜನರಿಗೆ ಆತ್ಮಸ್ಥೈರ್ಯ ಜೀವ ಉಳಿಸಿಕೊಳ್ಳುವ ಧೈರ್ಯ ಹೇಳಬೇಕೆ ಹೊರತು ಹಣಕಿತ್ತು ತಿನ್ನುವ ಮನೋಭಾವ ಇಟ್ಟುಕೊಂಡು ಕೆಲಸ ಮಾಡಬಾರದು ನಿಜಕ್ಕೂ ಸಾರ್ವಜನಿಕರ ಕೆಲಸ ಯಾರೇ ಮಾಡಲಿ ಮೊದಲು ಕಲಿಯಬೇಕಾದದ್ದು ಸ್ಪಂದಿಸುವ ನಯ ವಿನಯ ಕಲಿತುಕೊಳ್ಳಬೇಕು ಇಲ್ಲವಾದರೆ ಸಾರ್ವಜನಿಕರ ಕೆಲಸಕ್ಕೆ ಬರಬಾರದು, ಎಂದು ಭಾರತೀಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಕಾರ್ಯಧ್ಯಕ್ಷರು ತಿಮ್ಮರಾಜು ವಿಭಾಗಿಯ ಅಧ್ಯಕ್ಷರು ಎಚ್ ,ರಾಜಪ್ಪನವರು ಹಾಗೂ ಘಾಟ್ ಮಂಜುನಾಥ್, ತಾಲೂಕು ಅಧ್ಯಕ್ಷರು ಚಿದಾನಂದ್ ಜಿಲ್ಲಾ ಕಾರ್ಯದರ್ಶಿ ಮೋಹನ್ ಕುಮಾರ್ ರವರು ತಾಲೂಕು ವೈದ್ಯಾಧಿಕಾರಿ ರವರಿಗೆ ಮನವಿ ನೀಡಿದರು, ವರದಿ ಮಹೇಶ್ ಆರ್ ಆಲ್ ಇಂಡಿಯಾ ಮೀಡಿಯಾ

283
8288 views