logo

*ಪಂ.ಜವಾಹರಲಾಲ್ ನೆಹರುರವರ ಹುಟ್ಟು ಹಬ್ಬ, ಮಕ್ಕಳ ದಿನಾಚರಣೆಯ ನಿಮಿತ್ಯ, ಚಿಕ್ಕೋಡಿ ತಾಲೂಕಿನ ಕೇರೂರ ಗ್ರಾಮದ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ನ

*ಪಂ.ಜವಾಹರಲಾಲ್ ನೆಹರುರವರ ಹುಟ್ಟು ಹಬ್ಬ, ಮಕ್ಕಳ ದಿನಾಚರಣೆಯ ನಿಮಿತ್ಯ, ಚಿಕ್ಕೋಡಿ ತಾಲೂಕಿನ ಕೇರೂರ ಗ್ರಾಮದ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ನೋಟಬುಕ್ಕ, ಪೆನ್ನ, ಸಿಹಿ ವಿತರಣೆ.*
*ನೆಹರು ಜಯಂತಿ ಮತ್ತು ಮಕ್ಕಳ ದಿನಾಚರಣೆಯ ಅಂಗವಾಗಿ, ಕೇರೂರ ಗ್ರಾಮದ ಸರಕಾರಿ ಪ್ರೌಢ ಶಾಲಾ ಮಕ್ಕಳಿಗೆ ನೋಟ ಬುಕ್, ಪೆನ್ನ ಮತ್ತು ಸಿಹಿ ಹಂಚುವ ಮೂಲಕ, ಚಿಕ್ಕೋಡಿ ಪಟ್ಟಣದ ಖ್ಯಾತ ಹೃದ್ರೋಗ ತಜ್ಞ ವೈದ್ಯರಾದ ಡಾ. ಶ್ರೀಧರ ಕುಲಕರ್ಣಿ ಇವರು, ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು, ಈ ಸಂಧರ್ಭದಲ್ಲಿ ಮಾತನಾಡಿದ ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿ, ಸರಕಾರಿ ಶಾಲೆಯಲ್ಲಿ ಕಲೆಯುವುದು ಅಂದರೆ ಇದು ಒಂದು ಸಾಧನೆಯ ಮಾರ್ಗ, ರಾಜ್ಯದಲ್ಲಿ ಸರಕಾರಿ ಶಾಲೆಯಲ್ಲಿ ಶಿಕ್ಷಣ ಪಡೆದ ಸುಮಾರು ಶೇ 80 ಕ್ಕೂ ಹೆಚ್ಚು ಜನರು, ಉಮ್ಮತ ಸ್ಥಾನಗಳಲ್ಲಿ ಇದ್ದಾರೆ, ನಮ್ಮ ಭವಿಷ್ಯ ಉಜ್ವಲವಾಗಬೇಕಾದರೆ ಮುಂದೆ ಗುರಿ ಇರಬೇಕು, ಹಿಂದೆ ಗುರು ಇರಬೇಕು, ತಾವೆಲ್ಲರೂ ಶೃದ್ಧಾ ಭಕ್ತಿಯಿಂದ ಅಭ್ಯಾಸ ಮಾಡಿ ಯಶಸ್ಸನ್ನು ಕಾಣಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು, ಡಾ. ಶ್ರೀಧರ ಕುಲಕರ್ಣಿ ಮಾತನಾಡಿ, ನಾನು ಕಲೆತಿದ್ದು ಸರಕಾರಿ ಶಾಲೆಯಲ್ಲಿ, ಸರಕಾರಿ ಶಾಲೆಯಲ್ಲಿ ಸಿಗುವ ಅನುಭವ ಬೇರೆಲ್ಲಿಯೂ ಸಿಗಲಾರದು, ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿ, ತಮ್ಮ ತಂದೆ-ತಾಯಿ, ಊರಿನ ಹೆಸರನ್ನು ಮುಂದೆ ತರಬೇಕು ಎಂದು ಹೇಳಿದರು, ಈ ಕಾರ್ಯಕ್ರಮದಲ್ಲಿ ಕರವೇ ತಾಲೂಕಾ ಅಧ್ಯಕ್ಷರಾದ ಸಂಜು ಬಡಿಗೇರ ಮತ್ತು ಡಾ. ಶ್ರೀಧರ ಕುಲಕರ್ಣಿ ಇವರನ್ನು, ಪ್ರೌಢ ಶಾಲೆಯಿಂದ ಸತ್ಕರಿಸಿ ಗೌರವಿಸಿದರು, ಈ ಸಂಧರ್ಭದಲ್ಲಿ ಹೋರಾಟಗಾರರಾದ ಪ್ರತಾಪಗೌಡ ಪಾಟೀಲ, ರುದ್ರಯ್ಯಾ ಹಿರೇಮಠ, ಮುಖ್ಯೋಪಾಧ್ಯಾಯರಾದ ಆರ್. ಟಿ. ಕಾಂಬಳೆ, ರಾಜೇಂದ್ರ ದೇವಖುಷಿ ಸೇರಿದಂತೆ ವಿದ್ಯಾರ್ಥಿ ವಿದ್ಯಾರ್ಥಿನಿಯರು, ಶಿಕ್ಷಕರು ಉಪಸ್ಥಿತರಿದ್ದರು..ಎಮ್.ಕೆ.ಪತ್ತಾರ ಸ್ವಾಗತಿಸಿದರು, ಎಮ್.ಬಿ.ಮಗದುಮ್ ನಿರೂಪಿಸಿದರು ಮತ್ತು ಎಮ್. ಆಯ್. ಕಮತೆ ವಂದಿಸಿದರು*

0
0 views