logo

ಎಲ್ಲಾ ಧರ್ಮದ ಮೂಲಭೂತ ವಾದವನ್ನು ಪ್ರಶ್ನಿಸಬೇಕು ಅಂದಾಗಲೇ ಸಾಮರಸ್ಯದ ಸಮಾಜ ಕಟ್ಟಲು ಸಾಧ್ಯ.

ಹಿಂದೂ ಮೂಲಭೂತವಾದಿಗಳು ಕೋಮುವಾದಿಗಳು ಎಂದು ಟಿಕೀಸುವ ಪ್ರಗತಿಪರರು ಬುದ್ದಿಜೀವಿಗಳು, ಸಾಹಿತಿಗಳು ಎಂದು ಕೂಡ ಮುಸ್ಲಿಂ ಮೂಲಭೂತವನ್ನು ಅವರಲ್ಲಿಯ ಅತಿಹೆಚ್ಚು ಅಡಗಿಕೊಂಡ ಕೋಮುವಾದಿಯ ಮನಸ್ಥಿತಿ ಯನ್ನು ಪ್ರಶ್ನಿಸುವ ಗೋಜಿಗೆ ಹೋಗಲಿಲ್ಲ ಕಾರಣ ಎಲ್ಲರಿಗೂ ತಿಳಿದಿರುವುದೇ.
ಪ್ರಗತಿಪರರ ಗುಂಪಿನಲ್ಲಿ ಕಾಣಸಿಗುವ ಮುಸ್ಲಿಂ ಸಮುದಾಯದವರು ಬೆರಳೆಣಿಕೆಯಷ್ಟು ಮಾತ್ರ,ಇಡೀ ನಮ್ಮ ಒಂದೆರೆಡು ಶತಮಾನ ಹುಡುಕಿದರೂ ಸಿಕ್ಕುವುದಿಲ್ಲ. ಅದು ಬೋಳುವಾರು, ಸಾರಾ ಅಬ್ಬುಬಕರ್, ರಹಮತ ತರೀಕೆರೆ, ಬಾನು ಮಾಸ್ತಕ್ ಇವರೆಲ್ಲರೂ ತಮ್ಮ ಸಮುದಾಯದ ಮೂಲಭೂತವಾದಿಗಳನ್ನು ಒಂದು ಸಲ ಪ್ರಶ್ನಿಸಿ ಮುಂದೆ ಅದರಿಂದ ಪರಿಣಾಮಕ್ಕೆ ಅಂಜಿ ಧೈರ್ಯದಿಂದ ಪ್ರಶ್ನಿಸುವುದನ್ನೇ ಮರೆತಿದ್ದಾರೆ, ಅದಕ್ಕೆ ಬಾಂಗ್ಲಾದೇಶದ ತಸ್ಲೀಮ್ ನಸ್ರಿನ್ ಉದಾಹರಣೆಯಾಗಿ ನಿಲ್ಲುತ್ತಾರೆ ದೇಶ ಬೇರೆಯಾದರು ಮನಸ್ಥಿತಿ ಒಂದೇ. ಇವರ ಪ್ರಗತಿಪರ ವಿಚಾರಧರೆಗಳೆಲ್ಲವೂ ಹಿಂದೂ ಧರ್ಮದ ವಿರುದ್ಧವೇ.
ಬಹುಷಃ ಆ ಸಮುದಾಯದವರೇ ಆತ್ಮವಿಮರ್ಶೆ ಮಾಡಿಕೊಳ್ಳುಬೇಕು. ಇವತ್ತಿನ ದೆಹಲಿ ಸ್ಫೋಟದ ಬಗ್ಗೆ ಯಾವ ಮುಸ್ಲಿಂ ಪ್ರಗತಿಪರರು ಗಟ್ಟಿಯಾಗಿ ಆ ಕೃತ್ಯವನ್ನು ಖಂಡಿಸಿದ್ದಾರೆ. ತ್ರಿಪಲ್ ತಲಾಕ್, ಹಿಜಾಬ್ ಬಗ್ಗೆ ಬೀದಿಗಿಳಿದವರು ಇಂದು ಯಾರು ಬೀದಿಗಿಳಿದಿದ್ದಾರೆ ಹೇಳಿ. ಅವರ ಪ್ರತಿ ಭಯೋತ್ಪಾದನೆ ಕೃತ್ಯದ ಬಗ್ಗೆ ವಹಿಸುವ ಮೌನ ಅವರನ್ನು ಭಾರತ ನೆಲದ ಬಹುಸಂಖ್ಯೆತರಲ್ಲಿ ಅಪನಂಬಿಕೆ ಮೂಡಿಸುವಲ್ಲಿ ಅವರೇ ಪ್ರಮುಖ ಪಾತ್ರ ವಹಿಸಿದ್ದಾರೆ. ಸಧ್ಯ ಈಗ ಎಷ್ಟು ಅಪನಂಬಿಕೆ ಮೂಡಿದೆ ಎಂದರೆ ದೇವಸ್ಥಾನದ ಮುಂದೆ ಅವರಿಗೆ ವ್ಯಾಪಾರಕ್ಕೆ ಸರ್ಕಾರ ಜಾಗ ಕೊಡಬಾರದು ಎನ್ನುವಷ್ಟು ಆದರೂ ಅದರಿಂದ ಆ ಸಮುದಾಯದವರು ಇನ್ನು ನಿದ್ದೆಯಿಂದ ಎಚ್ಚರವಾಗಿಲ್ಲ.

ಇನ್ನು ಆ ಸಮುದಾಯದವರು ಎಚ್ಛೆತ್ತುಕೊಳ್ಳದಿದ್ದರೆ ಮುಂದೆ ಸಂಪೂರ್ಣವಾಗಿ ಇಲ್ಲಿಯ ಬಹುಸಂಖ್ಯೆಯ ಜನರ ನಂಬಿಕೆಯನ್ನು ಕಳೆದುಕೊಳ್ಳಬೇಕಾಗುತ್ತದೆ.

ಭಯೋತ್ಪಾದನೆಗೆ ಧರ್ಮವಿಲ್ಲ ಎನ್ನುತ್ತಾರೆ ಆದರೆ ಧರ್ಮದ ಅಮಲಿನಲ್ಲಿಯೇ ಭಯೋತ್ಪಾದನೆ ಹುಟ್ಟುಕೊಂಡಿದೆ ಎಂಬುದು ಜಾಗತಿಕ ಮಟ್ಟದಲ್ಲಿ ರುಜುವಾತಾಗಿದೆ.
ಇನ್ನಾದರೂ ಮುಸ್ಲಿಂ ಸಮುದಾಯದ ಧಾರ್ಮಿಕ ಮುಖಂಡರು, ರಾಜಕೀಯ ನಾಯಕರು, ಇದರ ಬಗ್ಗೆ ಗಂಭೀರವಾಗಿ ಯೋಚಿಸಬೇಕು. ತಪ್ಪನ್ನು ಖಂಡಿಸುವ ಚಾತಿಯನ್ನು ರೂಢಿಸಿಕೊಳ್ಳಬೇಕು. ಸರ್ವಧರ್ಮ ಸಮಾಣತೆಯಲ್ಲಿ ನಂಬಿಕೆಯನ್ನು ಇಡಬೇಕು.
ಜಗತ್ತಿನಲ್ಲಿ ಎಲ್ಲೇ ಹೋದರು ಭಾರತದಂತ ಸುಂದರ ದೇಶ ಸಿಕ್ಕದು.

0
743 views